ದಾಳಿ ಉಗ್ರರಿಗಿಂತ ಬೌದ್ಧಿಕ ಉಗ್ರರು ಹೆಚ್ಚು ಅಪಾಯಕಾರಿ : ದಿಲ್ಲಿ ಪೊಲೀಸ್

| N/A | Published : Nov 21 2025, 01:30 AM IST

Terror Attack
ದಾಳಿ ಉಗ್ರರಿಗಿಂತ ಬೌದ್ಧಿಕ ಉಗ್ರರು ಹೆಚ್ಚು ಅಪಾಯಕಾರಿ : ದಿಲ್ಲಿ ಪೊಲೀಸ್
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧಿಜೀವಿಗಳು ಭಯೋತ್ಪಾದಕರಾದಾಗ, ಅವರು ನೇರವಾಗಿ ಉಗ್ರ ಚಟುವಟಿಕೆ ನಡೆಸುವವರಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಾರೆ ಎಂದು ದೆಹಲಿ ಪೊಲೀಸರು ಗುರುವಾರ ಸುಪ್ರೀಂ ಕೋರ್ಟ್‌ ಮುಂದೆ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: ಬುದ್ಧಿಜೀವಿಗಳು ಭಯೋತ್ಪಾದಕರಾದಾಗ, ಅವರು ನೇರವಾಗಿ ಉಗ್ರ ಚಟುವಟಿಕೆ ನಡೆಸುವವರಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಾರೆ ಎಂದು ದೆಹಲಿ ಪೊಲೀಸರು ಗುರುವಾರ ಸುಪ್ರೀಂ ಕೋರ್ಟ್‌ ಮುಂದೆ ಅಭಿಪ್ರಾಯಪಟ್ಟಿದ್ದಾರೆ.

2020ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಹಿಂಸಾಚಾರ

2020ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಹಿಂಸಾಚಾರ ನಡೆಸಿದ ಆರೋಪ ಹೊತ್ತಿರುವ ಉಮರ್‌ ಖಲೀದ್‌, ಶಾರ್ಜೀಲ್‌ ಇಮಾಮ್‌ ಮೊದಲಾದವರ ಜಾಮೀನು ಅರ್ಜಿ ವಿಚಾರಣೆ ವೇಳೆ, ದೆಹಲಿ ಪೊಲೀಸರ ಪರವಾಗಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ವಾದ ಮಂಡಿಸಿದರು.

ವೃತ್ತಿಯ ಬದಲು ದೇಶವಿರೋಧಿ ಚಟುವಟಿಕೆ

‘ಹಿಂಸಾಚಾರ ಆರೋಪಿ ಇಮಾಮ್‌ ಇಂಜಿನಿಯರ್‌ ಆಗಿದ್ದವನು. ಇತ್ತೀಚೆಗೆ ವೈದ್ಯರು, ಇಂಜಿನಿಯರ್‌ಗಳು ತಮ್ಮ ವೃತ್ತಿಯ ಬದಲು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಟ್ರೆಂಡ್‌ ಆರಂಭವಾಗಿದೆ. ಇದು ಸರಳವಾದ ಪ್ರತಿಭಟನೆಯಾಗಿರಲಿಲ್ಲ. ಆಡಳಿತ ಬದಲಾವಣೆ ಅವರ ಅಂತಿಮ ಉದ್ದೇಶವಾಗಿತ್ತು. ಹಾಗಾಗಿ ಅವರಿಗೆ ಜಾಮೀನು ನೀಡಬಾರದು. ತಥಾಕಥಿಕ ಬುದ್ಧಿಜೀವಿಗಳು ನೇರ ಉಗ್ರಕೃತ್ಯ ನಡೆಸುವವರಿಗಿಂತ ಬಹಳ ಅಪಾಯಕಾರಿ’ ಎಂದು ಮನವಿ ಮಾಡಿದರು.

Read more Articles on