- ಲೆಬನಾನ್, ಗಾಜಾ ಮೇಲೆ ಇಸ್ರೇಲ್ ದಾಳಿ ನಿಲ್ಲಲಿ
- ಅಲ್ಲಿಯವರೆಗೆ ಮಾತುಕತೆ ಅಸಾಧ್ಯ: ಇರಾನ್ ಸರ್ಕಾರಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕತೆಯ ಮತ್ತೊಂದು ರಸ್ತೆ ಅಡಚಣೆಯನ್ನು ಎದುರಿಸಿದೆ. ಇಸ್ರೇಲಿ ಪಡೆಗಳು ಲೆಬನಾನ್ ಮತ್ತು ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವವರೆಗೆ ಮಧ್ಯವರ್ತಿಗಳ ಮೂಲಕ ಯಾವುದೇ ಮಾತುಕತೆ ಮುಂದುವರಿಯಲು ಸಾಧ್ಯವಿಲ್ಲ. ಅವರ ಮೂಲಕ ಯಾವುದೇ ವಿಚಾರ ವಿನಿಮಯ ಮಾಡಿಕೊಳ್ಳುವುದಿಲ್ಲ ಎಂದಿದೆ ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮವು ಇಡೀ ಪ್ರದೇಶಕ್ಕೆ ಅನ್ವಯವಾಗಬೇಕು ಎಂಬ ಟೆಹ್ರಾನ್‌ನ ನಿಲುವನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಪುನರುಚ್ಚರಿಸಿದ್ದಾರೆ. ಅಲ್ಲದೆ, ‘ಕದನವಿರಾಮ ಇಡೀ ಪ್ರದೇಶದ ತುಂಬ ವ್ಯಾಪಿಸಿರಬೇಕು. ಒಂದು ಕಡೆ ಅದರ ಉಲ್ಲಂಘನೆ ಆದರೂ ಎಲ್ಲ ಕಡೆ ಕದನ ವಿರಾಮದ ಉಲ್ಲಂಘನೆಯಾದಂತೆ’ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊನ್ನೆ ಮಾತನಾಡಿ, ‘ಇರಾನ್ ಸಂಧಾನಕ್ಕೆ ಹಾತೊರೆಯುತ್ತಿದೆ. ಸಂಧಾನ ಏರ್ಪಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಅಮೆರಿಕ ಮತ್ತೆ ದಾಳಿ ಮಾಡಬೇಕಾಗಬಹುದು’ ಎಂದಿದ್ದರು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.==
ಶಾಂತಿ ಮಾತುಕತೆ ನಡುವೆ ಅಮೆರಿಕ-ಇರಾನ್ ದಾಳಿ-ಪ್ರತಿದಾಳಿ- ಇರಾನ್‌ನ ಕಮಾಂಡ್ ಕಂಟ್ರೋಲ್ ಸೈಟ್ ಮೇಲೆ ದಾಳಿ
- ಡ್ರೋನ್‌ಗಳನ್ನೂ ಹೊಡೆದುರುಳಿಸಿದ ಅಮೆರಿಕ ಸೇನೆ
- ಇದಕ್ಕೆ ಪ್ರತಿಯಾಗಿ ಕುವೈತ್ ಮೇಲೆ ಇರಾನ್ ದಾಳಿದುಬೈ: ಅಮೆರಿಕ-ಇರಾನ್ ನಡುವಿನ ಶಾಂತಿ ಮಾತುಕತೆ ನಡುವೆಯೇ ಇರಾನ್‌ನ ರೇಡಾರ್ ಹಾಗೂ ಡ್ರೋನ್ ಕಂಟ್ರೋಲ್ ಕೇಂದ್ರಗಳ ಮೇಲೆ ಅಮೆರಿಕ ಶನಿವಾರ ಹಾಗೂ ಭಾನುವಾರ ವಾಯುದಾಳಿ ನಡೆಸಿದೆ. ಇದಕ್ಕೆ ಅಮೆರಿಕದ ಮಿತ್ರದೇಶ ಕುವೈತ್ ಮೇಲೆ ಇರಾನ್ ಪ್ರತಿದಾಳಿ ಮಾಡಿದೆ.ತನ್ನ ಎಂಕ್ಯು-1 ಪರಿವೀಕ್ಷಣಾ ಡ್ರೋನ್ ನಾಶಪಡಿಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಈ ದಾಳಿ ನಡೆಸಿದೆ ಎನ್ನಲಾಗಿದೆ. ಆದರೆ ಇದಕ್ಕೆ ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಇರಾನ್ ತಿರುಗೇಟಿಗೆ ಯತ್ನಿಸಿದೆ. ಆದಾಗ್ಯೂ ಇರಾನ್‌ನ ಕ್ಷಿಪಣಿ, ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ ಎಂದು ಎಂದು ಕುವೈತ್ ಹೇಳಿಕೊಂಡಿದೆ.
ಅಮೆರಿಕ ಹೇಳಿದ್ದೇನು?ಗೋರುಕ್, ಕೇಶಂ ದ್ವೀಪದಲ್ಲಿರುವ ಇರಾನ್ ರೇಡಾರ್ ಮತ್ತು ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರಗಳ ಮೇಲೆ ಅಮೆರಿಕದ ವಿಮಾನಗಳು ಬಾಂಬ್ ದಾಳಿ ನಡೆಸಿವೆ.ಅಂತಾರಾಷ್ಟ್ರೀಯ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತನ್ನ ಎಂಕ್ಯು-1ಪ್ರಿಡೇಟರ್ ಡ್ರೋನ್ ಅನ್ನು ಹೊಡೆದುರುಳಿಸಿದಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿಕೊಂಡಿದೆ.ತನ್ನ ಯುದ್ಧವಿಮಾನಗಳು ಇರಾನ್‌ನ ಗ್ರೌಂಡ್ ಕಂಟ್ರೋಲ್ ಸ್ಟೇಷನ್ ಮತ್ತು ಹೋರ್ಮುಜ್ ಜಲಾಶಯದಲ್ಲಿ ವಾಣಿಜ್ಯ ಹಡಗುಗಳಿಗೆ ಆತಂಕವೊಡ್ಡುತ್ತಿರುವ 2 ಆತ್ಮಾಹುತಿ ದಾಳಿ ಡ್ರೋನ್‌ಗಳನ್ನು ಹೊಡೆದುರುಳಿಸಿವೆ ಎಂದೂ ಅಮೆರಿಕ ತಿಳಿಸಿದೆ.