ಸಾರಾಂಶ
ಕ್ಷ-ಕಿರಣಗಳ ಸಹಾಯದಿಂದ ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ‘ಎಕ್ಸ್‌ಪೋ ಸ್ಯಾಟ್’ ಉಪಗ್ರಹವು ‘ಕ್ಯಾಸ್ಸಿಯೋಪಿಯಾ ಎ’ ಎಂಬ ಸೂಪರ್‌ನೋವಾದ ಅವಶೇಷದ ಬೆಳಕನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಪಿಟಿಐ ಬೆಂಗಳೂರುಕ್ಷ-ಕಿರಣಗಳ ಸಹಾಯದಿಂದ ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ‘ಎಕ್ಸ್‌ಪೋ ಸ್ಯಾಟ್’ ಉಪಗ್ರಹವು ‘ಕ್ಯಾಸ್ಸಿಯೋಪಿಯಾ ಎ’ ಎಂಬ ಸೂಪರ್‌ನೋವಾದ ಅವಶೇಷದ ಬೆಳಕನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಅಂಡ್ ಟೈಮಿಂಗ್ (ಎಕ್ಸ್‌ಸ್ಪೆಕ್ಟ್) ಸಹಾಯದಿಂದ ಈ ಬೆಳಕನ್ನು ಸೆರೆ ಹಿಡಿದಿದೆ. ಜ.1ರಂದು ಉಡಾವಣೆಯಾಗಿರುವ ಎಕ್ಸ್‌ಪೋಸ್ಯಾಟ್ ಎರಡು ಉಪಕರಣಗಳನ್ನು ಹೊಂದಿದೆ.
ಪೋಲಿಕ್ಸ್ ಹಾಗೂ ಹಾಗೂ ಎಕ್ಸ್‌ಸ್ಪೆಕ್ಟ್ ಎಂಬ ಈ ಉಪಕರಣಗಳು ಬ್ರಹ್ಮಾಂಡದ ಕ್ಷಕಿರಣಗಳನ್ನು ಅಧ್ಯಯನ ನಡೆಸುತ್ತವೆ. ಜ.5ರಂದು ಎಕ್ಸ್‌ಸ್ಪೆಕ್ಟ್ ಸಾಧನವು ಕ್ಯಾಸ್ಸಿಯೋಪಿಯಾ ಎ ಅನ್ನು ವೀಕ್ಷಿಸಿ ಬೆಳಕನ್ನು ಸೆರೆ ಹಿಡಿದಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.