ಸಾರಾಂಶ
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶುಕ್ರವಾರ ತನ್ನ ಭೂ ಪರಿವೀಕ್ಷಣಾ ಉಪಗ್ರಹ ಇಒಎಸ್-8ರ ಉಡ್ಡಯನವನ್ನ ನಡೆಸಲು ಸಜ್ಜಾಗಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.19ಕ್ಕೆ ಈ ಉಪಗ್ರಹ ಉಡಾವಣೆಯಾಗಲಿದೆ.
ಈ ಮೊದಲು ಉಡಾವಣೆಯಾದ ಪಿಎಸ್‌ಎಲ್‌ವಿ-ಸಿ58/ಎಕ್ಸ್‌ಪೋಸಾಟ್ ಮತ್ತು ಜುಎಸ್‌ಎಲ್‌ವಿ-ಎಫ್14/ಇನ್ಸಾಟ್-3ಡಿಎಸ್‌ನ ಬಳಿಕ ಎಸ್‌ಎಸ್‌ಎಲ್‌ವಿ-ಡಿ3 ಸರಣಿಯ ಉಪಗ್ರಹದ ಕೊನೆಯ ಉಡ್ಡಯನ ಇದಾಗಿದೆ.
ಈ ಮೊದಲು ಆ.15ರಂದು ಉಡಾವಣೆ ನಡೆಸಲು ನಿರ್ಧರಿಸಲಾಗಿದ್ದು, ನಂತರ ಅದನ್ನು ಆ.6ಕ್ಕೆ ಮುಂದೂಡಲಾಗಿತ್ತು. ಈ ಮುಂದೂಡಿಕೆಗೆ ಯಾವುದೇ ಕಾರಣ ನೀಡಿರಲಿಲ್ಲ.
ಅಗ್ನಿ ಕ್ಷಿಪಣಿ ಪಿತಾಮಹ ಅಗರ್‌ವಾಲ್ ನಿಧನ
ಹೈದರಾಬಾದ್: ಅಗ್ನಿ ಕ್ಷಿಪಣಿಗಳ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಆರ್.ಎನ್. ಅಗರ್‌ವಾಲ್ (84) ಗರುವಾರ ನಿಧನರಾದರು. ಅಗರ್‌ವಾಲ್ ಮಹತ್ವಾಕಾಂಕ್ಷೆಯ ಅಗ್ನಿ ಯೋಜನೆಯನ್ನು 1983ರಲ್ಲಿ ಪ್ರಾರಂಭವಾದಾಗಿನಿಂದ ಮುನ್ನಡೆಸಿದ್ದರು. ಅವರು ಮೇ 22, 1989 ರಂದು ಅಗ್ನಿಯ ಮೊದಲ ಯಶಸ್ವಿ ಉಡಾವಣೆಯ ನೇತೃತ್ವ ವಹಿಸಿದ್ದರು. ನಂತರ ಅನೇಕ ಆವೃತ್ತಿಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ಅಸಾಧಾರಣ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿ ವಿಕಸನಗೊಂಡಿತ್ತು. ಅಗರ್‌ವಾಲ್ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))