ಸಾರಾಂಶ
ಟಿಡಿಪಿ ತುಕ್ಕು ಹಿಡಿದ ಸೈಕಲ್ ಆಗಿದ್ದು, ತಾವು ಶೋಷಿತರ ಪರ ನಿಲ್ಲುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಭರವಸೆ ನೀಡಿದ್ದಾರೆ.
ಹೈದರಾಬಾದ್: ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ತುಕ್ಕು ಹಿಡಿದ ಸೈಕಲ್‌ನಂತಾಗಿದ್ದು, ರಾಜ್ಯದಲ್ಲಿ ಸೂಕ್ತ ಬೆಂಬಲ ಸಿಗದ ಕಾರಣ ದೆಹಲಿಗೆ ತೆರಳಿ ಬಿಜೆಪಿ ಹಾಗೂ ಜನಸೇನಾ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ವೈಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ ರೆಡ್ಡಿ ಕಿಡಿಕಾರಿದ್ದಾರೆ.
ಆದರೆ ತಮ್ಮ ವೈಎಸ್‌ಆರ್‌ಸಿ ಪಕ್ಷ ಅವರ ಮೈತ್ರಿಯ ವಿರುದ್ಧ ಹೋರಾಡಲಿದ್ದು, ಶೋಷಿತರ ಅಭಿವೃದ್ಧಿಯೇ ತಮ್ಮ ಪಕ್ಷದ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.ಟಿಡಿಪಿ-ಜನಸೇನಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.