ಸ್ಪೀಕರ್‌ ಸಮಿತಿ ಸದಸ್ಯರಾಗಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್‌ ಆಯ್ಕೆ

| Published : Jul 02 2024, 01:34 AM IST / Updated: Jul 02 2024, 06:16 AM IST

PC Mohan
ಸ್ಪೀಕರ್‌ ಸಮಿತಿ ಸದಸ್ಯರಾಗಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್‌ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಕೇಂದ್ರ ಸಂಸದ ಪಿ.ಸಿ ಮೋಹನ್ ಸ್ಪೀಕರ್‌ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ನವದೆಹಲಿ : ಬೆಂಗಳೂರು ಕೇಂದ್ರ ಸಂಸದ ಪಿ.ಸಿ ಮೋಹನ್ ಸ್ಪೀಕರ್‌ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಸೋಮವಾರ ಸ್ಪೀಕರ್‌ ಸಮಿತಿ ಸದಸ್ಯರುಗಳ ಹೆಸರನ್ನು ಘೋಷಿಸಿದ್ದಾರೆ. ಒಟ್ಟು 8 ಮಂದಿ ಸಂಸದರ ಹೆಸರನ್ನು ಓಂ ಬಿರ್ಲಾ ಘೋಷಿಸಿದ್ದು, ಸಮಿತಿ ಸದಸ್ಯರು ಬಿರ್ಲಾ ಅನುಪಸ್ಥಿತಿಯಲ್ಲಿ ಸದನ ನಡೆಸಿಕೊಡಲಿದ್ದಾರೆ.

ಪಟ್ಟಿಯಲ್ಲಿ ಪಿ.ಸಿ ಮೋಹನ್ ಜೊತೆಗೆ ಜಗದಾಂಬಿಕಾ ಪಾಲ್, ಸಂಧ್ಯಾ ರೈ, ದಿಲೀಪ್ ಸೈಕಿಯಾ, ಎ.ರಾಜಾ,ಕಾಕೋಲಿ ಘೋಷ್ ದಾಸ್ತಿದಾರ್‌, ಕೃಷ್ಣ ಪ್ರಸಾದ್ , ಅವದೇಶ್‌ ಪ್ರಸಾದ್ ಅವರ ಹೆಸರು ಕೂಡ ಇದೆ.

ಸಭಾಧ್ಯಕ್ಷರು ಸದನದಲ್ಲಿ ಲಭ್ಯರಿಲ್ಲದ ಸಂದರ್ಭದಲ್ಲಿ ಸಭಾಪತಿಗಳ ಸಮಿತಿಯು ಕಲಾಪವನ್ನು ನಿರ್ವಹಿಸುತ್ತದೆ.ಇನ್ನು ಸಮಿತಿ ಸದಸ್ಯರು ಸ್ಪೀಕರ್‌ಗೆ ನೀಡಲಾಗುವ ಎಲ್ಲ ಅಧಿಕಾರಗಳನ್ನು ಪಡೆಯುತ್ತಾರೆ.