ಬೆಂಗಳೂರಿನ ಕಂಪನಿಯಿಂದ ಮಂದಿರಕ್ಕೆ ‘ಸೂರ್ಯ ತಿಲಕ’ ಯಂತ್ರ ಕೊಡುಗೆ

| Published : Jan 13 2024, 01:32 AM IST

ಬೆಂಗಳೂರಿನ ಕಂಪನಿಯಿಂದ ಮಂದಿರಕ್ಕೆ ‘ಸೂರ್ಯ ತಿಲಕ’ ಯಂತ್ರ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುವ ರಾಮಲಲ್ಲಾನ ಮೇಲೆ ರಾಮನವಮಿಯಂದು ಸೂರ್ಯನ ರಶ್ಮಿಬೀಳುವಂತೆ ಮಾಡುವ ಯಂತ್ರವೊಂದನ್ನು ಬೆಂಗಳೂರು ಮೂಲದ ಕಂಪನಿ ರಾಮ ಮಂದಿರ ಟ್ರಸ್ಟ್‌ಗೆ ಉಡುಗರೆಯಾಗಿ ನೀಡಿದೆ.

ಅಯೋಧ್ಯೆ: ಪ್ರತಿವರ್ಷ ರಾಮನವಮಿಯ ದಿನ ರಾಮಲಲ್ಲಾನ ಮೂರ್ತಿಯ ಮೇಲೆ ಸೂರ್ಯನ ಬೆಳಕು ಬೀಳುವಂತೆ ಮಾಡುವ ‘ಸೂರ್ಯ ತಿಲಕ’ ಯಂತ್ರವನ್ನು ಬೆಂಗಳೂರಿನ ಕಂಪನಿಯೊಂದು ಕೊಡುಗೆಯಾಗಿ ನೀಡಿದೆ. ಇದು ಪೆರಿಸ್ಕೋಪ್‌ನಂತೆ ಕಾರ್ಯ ನಿರ್ವಹಿಸಲಿದ್ದು, ಸೂರ್ಯನ ಬೆಳಕನ್ನು ರಾಮ ಮೂರ್ತಿಯ ಮೇಲೆ ಪ್ರತಿಬಿಂಬಿಸಲಿದೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ ಮತ್ತು ಸೆಂಟ್ರಲ್‌ ಬಿಲ್ಡಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಸಹಯೋಗದೊಂದಿಗೆ ಬೆಂಗಳೂರಿನ ಜಿಗಣಿಯಲ್ಲಿರುವ ಆಪ್ಟಿಕ್ಸ್‌ ಅಂಡ್‌ ಅಲೈಡ್‌ ಎಂಜಿನಿಯರಿಂಗ್‌ ಪ್ರೈ.ಲಿ. ಈ ಯಂತ್ರವನ್ನು ತಯಾರಿಸಿದೆ. ಮಂದಿರದಲ್ಲಿ ಕಬ್ಬಿಣದ ಬಳಕೆ ಮಾಡಿಲ್ಲದ ಕಾರಣ ಇದನ್ನು ಟೈಟಾನಿಯಂ, ಹಿತ್ತಾಳೆ ಮತ್ತು ಕಂಚು ಬಳಸಿ ತಯಾರು ಮಾಡಲಾಗಿದೆ.