ಜಾಮ್‌ನಗರ ಏರ್ಪೋರ್ಟಿಗೆ 10 ದಿನ ಅಂ.ರಾ. ದರ್ಜೆ ಸ್ಥಾನಮಾನ

| Published : Mar 03 2024, 01:33 AM IST

ಜಾಮ್‌ನಗರ ಏರ್ಪೋರ್ಟಿಗೆ 10 ದಿನ ಅಂ.ರಾ. ದರ್ಜೆ ಸ್ಥಾನಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬಾನಿ ಕುಟುಂಬದ ಕಾರ್ಯಕ್ರಮ ಹಿನ್ನೆಲೆ ಜಾಮನಗರ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೆ ಮಾ.5ರವರೆಗೆ ಫೆ.25ರಿಂದ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ.

ಜಾಮ್‌ನಗರ: ಬಹುಕೋಟಿ ಉದ್ಯಮವಾಗಿರುವ ರಿಲಯನ್ಸ್‌ ಮುಖ್ಯಸ್ಥ ಮುಖೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರ ವಿವಾಹಪೂರ್ವ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಜಾಮ್‌ನಗರದ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲಾಗಿದೆ. ವಿದೇಶಿ ಗಣ್ಯರು ಆಗಮಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿದೇಶಿ ವಿಮಾನಗಳೂ ಕೂಡ ವಿಮಾನ ನಿಲ್ದಾಣದಲ್ಲಿ ನಿಲ್ಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸುಮಾರು 140ಕ್ಕೂ ಹೆಚ್ಚು ವಿಮಾನ ಜಾಮ್‌ನಗರದ ಮೂಲಕ ಸಂಚರಿಸಿವೆ. ಇಲ್ಲಿ ಏಕಕಾಲಕ್ಕೆ 6 ಚಿಕ್ಕ ಇಲ್ಲವೇ 3 ದೊಡ್ಡ ವಿಮಾನ ನಿಲ್ಲಿಸಬಹುದಾದ ರೀತಿಯಲ್ಲಿ ಪ್ರಾಂಗಣವನ್ನು ಮರುವಿನ್ಯಾಸ ಮಾಡಲಾಗಿದೆ.