ಸಾರಾಂಶ
ಜುಲೈನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ತಮ್ಮ ಲಿಬರಲ್ ಡೆಮಾಕ್ರಟಿಕ್ ಪಕ್ಷ ಪಕ್ಷ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಇಶಿಬಾ ಶಿಗೇರು ಅವರು ತಮ್ಮ ಹುದ್ದೆಗೆ ರಾಜೀನಾಮೆ ಪ್ರಕಟಿಸಿದ್ದಾರೆ.
ಟೋಕಿಯೋ: ಜುಲೈನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ತಮ್ಮ ಲಿಬರಲ್ ಡೆಮಾಕ್ರಟಿಕ್ ಪಕ್ಷ ಪಕ್ಷ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಇಶಿಬಾ ಶಿಗೇರು ಅವರು ತಮ್ಮ ಹುದ್ದೆಗೆ ರಾಜೀನಾಮೆ ಪ್ರಕಟಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಶಿಬಾ ಅವರು ಅಧಿಕಾರ ವಹಿಸಿಕೊಂಡಿದ್ದರು. ಈ ನಡುವೆ ಜುಲೈನಲ್ಲಿನ ಸಂಸತ್ ಮೇಲ್ಮನೆ ಚುನಾವಣೆ ಸೋಲಿನ ಹೊಣೆ ಅವರೇ ಹೊತ್ತುಕೊಳ್ಳಬೇಕು ಎಂದು ಕಳೆದ ಒಂದು ತಿಂಗಳಿನಿಂದ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್‌ಡಿಪಿ) ಬಲಪಂಥೀಯರು ಆಗ್ರಹಿಸಿದ್ದರು. ಮೊದಲು ಇಶಿಬಾ ಅದಕ್ಕೆ ಒಪ್ಪಿರಲಿಲ್ಲ.
ಈ ನಡುವೆ ಎಲ್‌ಡಿಪಿ ನಾಯಕತ್ವ ಬದಲಾವಣೆ ಮೇಲೆ ಸೋಮವಾರ ಮತ ಚಲಾವಣೆಗೆ ಆ ಬಣ ಮುಂದಾಗಿತ್ತು. ಒಂದು ವೇಳೆ ಅಲ್ಲಿ ಅವರಿಗೆ ಹಿನ್ನೆಡೆಯಾದರೆ ಪ್ರಧಾನಿ ವಿರುದ್ಧ ನೇರ ಅವಿಶ್ವಾಸ ನಿರ್ಣಯ ಮಂಡನೆ ಆಗುವ ಸಾಧ್ಯತೆ ಇತ್ತು. ಅದರಿಂದ ತಪ್ಪಿಸಿಕೊಳ್ಳಲು ಒಂದು ದಿನದ ಮುನ್ನವೇ ರಾಜೀನಾಮೆ ಬಗ್ಗೆ ಘೋಷಿಸಿದ್ದಾರೆ.