ಸಾರಾಂಶ
ನವದೆಹಲಿ: ಭಾರತದ ಮೊದಲ ಹೈಸ್ಪೀಡ್ ರೈಲು ಕಾರಿಡಾರ್ ಆಗಿರುವ ಮುಂಬೈ-ಅಹಮದಾಬಾದ್ ರೈಲು ಮಾರ್ಗದಲ್ಲಿ ಪರೀಕ್ಷೆ ನಡೆಸಲು ಜಪಾನ್ ದೇಶವು ಭಾರತಕ್ಕೆ 2 ಬುಲೆಟ್ ರೈಲುಗಳನ್ನು ಉಡುಗೊರೆಯಾಗಿ ನೀಡಲಿದೆ. 2026ರ ಅಂತ್ಯಕ್ಕೆ ಈ ರೈಲುಗಳು ಭಾರತಕ್ಕೆ ಬರಲಿವೆ.
ಶೆಂಕಸೆನ್ ರೈಲುಗಳು (ಬುಲೆಟ್ ರೈಲು) ಇ5 ಮತ್ತು ಇ3 ಮಾದರಿಗಳು ಇವಾಗಿವೆ. ಮುಂದಿನ ವರ್ಷದ ವೇಳೆ ಕಾರಿಡಾರ್‌ನ ಮೊದಲ ಹಂತ (ಸೂರತ್-ಬಿಲ್ಮೋರಾ ಮಾರ್ಗ) 48 ಕಿ.ಮೀ. ಮುಕ್ತಾಯಗೊಳ್ಳಲಿದ್ದು, ಅಲ್ಲಿ ಇವುಗಳನ್ನು ಓಡಿಸಿ ಪರೀಕ್ಷೆ ಮಾಡಲಾಗುತ್ತದೆ. ಈ ವೇಳೆ ಬುಲೆಟ್ ರೈಲು ತಂತ್ರಜ್ಞಾನದ ಬಗ್ಗೆ ಭಾರತದ ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಗುತ್ತದೆ.
ಬುಲೆಟ್ ರೈಲು ಯೋಜನೆ ಜಪಾನ್ ಸಹಯೋಗದ್ದಾಗಿದೆ. ಇದು ಭಾರತ ಜಪಾನ್ ಸ್ನೇಹದ ಪ್ರತೀಕವಾಗಿದೆ ಎಂದು ಜಪಾನ್ ಟೈಮ್ಸ್ ವರದಿ ಮಾಡಿದೆ.
ಮುಂಬೈ- ಅಹಮದಾಬಾದ್ ಬುಲೆಟ್ ರೈಲು ಮಾರ್ಗದ ಬಹುತೇಕ ಕಾಮಗಾರಿಗಳು ಶೇ.75ರಷ್ಟು ಮುಕ್ತಾಯಗೊಂಡಿದ್ದು, ಮುಂಬೈ ಪ್ರದೇಶದಲ್ಲಿ ಸುರಂಗ ಕಾಮಗಾರಿ ತಡವಾಗಿದೆ. ಇದು ಇನ್ನು 5 ವರ್ಷ ತೆಗೆದುಕೊಳ್ಳಲಿದೆ. 2030ರವೇಳೆಗೆ ಕಾರ್ಯಾಚರಣೆ ಆರಂಭ ಆಗಬಹುದು ಎನ್ನಲಾಗಿದೆ.