ಪರೀಕ್ಷಾ ಅಕ್ರಮ ತಡೆಯಲು ಲೋಕಸಭೆಯಲ್ಲಿ ಮಸೂದೆ

| Published : Feb 06 2024, 01:30 AM IST / Updated: Feb 06 2024, 08:58 AM IST

ಸಾರಾಂಶ

ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಕಲಿ ವೆಬ್‌ಸೈಟ್‌ಗಳಂತಹ ಅಕ್ರಮಗಳನ್ನು ತಡೆಯಲು ಕ್ರಮ ಜರುಗಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸೋಮವಾರ ಮಂಡಿಸಿದೆ.

ನವದೆಹಲಿ: ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಕಲಿ ವೆಬ್‌ಸೈಟ್‌ಗಳಂತಹ ಅಕ್ರಮಗಳನ್ನು ತಡೆಯಲು ಕ್ರಮ ಜರುಗಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸೋಮವಾರ ಮಂಡಿಸಿದೆ.

ಈ ಮಸೂದೆಯ ಅನ್ವಯ ಅಕ್ರಮ ಎಸಗುವವರಿಗೆ ಕನಿಷ್ಠ 3, ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರು.ವರೆಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನುಗಳಿಲ್ಲ. 

ಹೀಗಾಗಿ ಸರ್ಕಾರಿ ಪರೀಕ್ಷೆ (ಅಕ್ರಮ ತಡೆ) ಮಸೂದೆ-2024ನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮಂಡಿಸಿದ್ದಾರೆ. ಪ್ರಶ್ನೆಪ್ರತಿಕೆ ಸೋರಿಕೆ, ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗೆ ನೇವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡುವುದು ಮತ್ತು ಕಂಪ್ಯೂಟರ್‌ ವ್ಯವಸ್ಥೆಯ ಮೂಲಕ ಅಕ್ರಮ ಎಸಗುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. 

ಅಲ್ಲದೇ ನಕಲಿ ವೆಬ್‌ಸೈಟ್‌ಗಳನ್ನು ಬಳಸಿ ಹಣ ಸಂಪಾದನೆ ಮಾಡುವುದನ್ನು ಎಂದು ಅವರು ಹೇಳಿದರು.

ಈ ನಿಯಮ ಯುಪಿಎಸ್‌ಸಿ, ಎಸ್‌ಎಸ್‌ಸಿ, ರೈಲ್ವೆ ನೇಮಕಾತಿ, ಬ್ಯಾಂಕಿಂಗ್‌ ನೇಮಕ ಮತ್ತು ನ್ಯಾಷನಲ್‌ ಟೆಸ್ಟಿಂಗ್ ಏಜೆನ್ಸಿ ನಡೆಸುವ ಪರೀಕ್ಷೆಗಳಿಗೆ ಅನ್ವಯವಾಗುತ್ತದೆ.

ಈ ನಿಯಮಗಳನ್ನು ರಾಜ್ಯ ಸರ್ಕಾರಗಳು ಕೂಡಾ ಮಾದರಿಯಾಗಿ ಬಳಸಿಕೊಂಡು ತಮ್ಮ ರಾಜ್ಯಗಳಲ್ಲಿ ಅನ್ವಯ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.