ಜೆಎನ್‌ಯು ಚುನಾವಣೆಯಲ್ಲಿ ಎಡಪಂಥೀಯರಿಂದ ಕ್ಲೀನ್‌ಸ್ವೀಪ್‌

| Published : Mar 25 2024, 01:50 AM IST / Updated: Mar 25 2024, 03:10 PM IST

ಸಾರಾಂಶ

ಜೆಎನ್‌ಯು ಚುನಾವಣೆಯಲ್ಲಿ ಮಕಾಡೆ ಮಲಗಿದ ಎಬಿವಿಪಿ ಎಲ್ಲ ಪದಾಧಿಕಾರಿ ಸ್ಥಾನಗಳನ್ನು ಎಡಪಂಥೀಯರಿಗೆ ಬಿಟ್ಟುಕೊಟ್ಟಿದೆ.

ನವದೆಹಲಿ: ನಾಲ್ಕು ವರ್ಷಗಳ ಬಳಿಕ ನಡೆದ ದೆಹಲಿಯ ಜವಹರ್‌ಲಾಲ್‌ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್‌ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಎಡಪಂಥೀಯರ ಬೆಂಬಲಿಗರೇ ಪಡೆದುಕೊಂಡಿದ್ದಾರೆ. 

ಇದರೊಂದಿಗೆ ಆರ್‌ಎಸ್‌ಎಸ್‌ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಚುನಾವಣೆಯಲ್ಲಿ ಮಕಾಡೆ ಮಲಗಿದೆ. ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್‌ ಅಭ್ಯರ್ಥಿಯಾಗಿದ್ದ ಧನಂಜರ್‌ ಎಬಿವಿಪಿ ಪ್ರತಿನಿಧಿಯಾಗಿದ್ದ ಉಮೇಶ್‌ರನ್ನು ಸೋಲಿಸಿ ಪರಿಷತ್‌ನ ಅಧ್ಯಕ್ಷರಾಗಿ ಆಯ್ಕೆಯಾದರು.

ಇದೇ ವೇಳೆ ಎಸ್‌ಎಫ್‌ಐ ಬೆಂಬಲಿತ ಅಭ್ಯರ್ಥಿ ಅವಿಜಿತ್‌ ಘೋಷ್‌ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಬಿಎಪಿಎಸ್‌ಎದಿಂದ ಸ್ಪರ್ಧಿಸಿದ್ದ ಪ್ರಿಯಾಂಶಿ ಆರ್ಯ ಕಾರ್ಯದರ್ಶಿಯಾಗಿ ಚುನಾಯಿತರಾದರು. ಹಾಗೆಯೇ ಮೊಹಮ್ಮದ್‌ ಸಾಜಿದ್‌ ಜಂಟಿ ಕಾರ್ಯದರ್ಶಿಯಾಗಿ ಚುನಾಯಿತರಾದರು.