ಸಾರಾಂಶ
ಉತ್ತರ ಪ್ರದೇಶದ ಸೀತಾಪುರದಲ್ಲಿ ಹಾಡಹಗಲೇ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ಪತ್ರಕರ್ತನನ್ನು ‘ದೈನಿಕ ಜಾಗರಣ್’ ವರದಿಗಾರ ರಾಘವೇಂದ್ರ ಬಾಜಪೈ ಎಂದು ಗುರುತಿಸಲಾಗಿದೆ.
ಸೀತಾಪುರ: ಉತ್ತರ ಪ್ರದೇಶದ ಸೀತಾಪುರದಲ್ಲಿ ಹಾಡಹಗಲೇ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮೃತ ಪತ್ರಕರ್ತನನ್ನು ‘ದೈನಿಕ ಜಾಗರಣ್’ ವರದಿಗಾರ ರಾಘವೇಂದ್ರ ಬಾಜಪೈ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಮೇಲ್ಸೇತುವೆ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಪತ್ರಕರ್ತ ರಾಘವೇಂದ್ರ ಅವರನ್ನು ದುಷ್ಕರ್ಮಿಗಳು ಗುಂಡು ಹೊಡೆದು ಸಾಯಿಸಿದ್ದಾರೆ ಹಾಗೂ ಪರಾರಿಯಾಗಿದ್ದಾರೆ.
ರಾಘವೇಂದ್ರ ಇತ್ತೀಚೆಗೆ ಕೆಲವು ಸುದ್ದಿಗಳನ್ನು ಪ್ರಕಟಿಸಿದ್ದರು, ಇದರಿಂದಾಗಿ ಕೆಲವು ದುಷ್ಟಶಕ್ತಿಗಳು ಕೋಪಗೊಂಡಿದ್ದವು ಎನ್ನಲಾಗಿದೆ. ಈ ಬಗ್ಗೆ ಎಲ್ಲ ಕೋನದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.