ಬಿಯರ್‌ ಬಾಟಲಿಯಿಂದ 36 ಬಾರಿ ಇರಿದು ಶಾಪಿಂಗ್‌ಗೆ ಕರೆದೊಯ್ದು ಮಾರ್ಗಮಧ್ಯ ಅಪ್ರಾಪ್ತೆಯಿಂದ ಪತಿ ಹತ್ಯೆ

| N/A | Published : Apr 19 2025, 12:47 AM IST / Updated: Apr 19 2025, 06:06 AM IST

ಬಿಯರ್‌ ಬಾಟಲಿಯಿಂದ 36 ಬಾರಿ ಇರಿದು ಶಾಪಿಂಗ್‌ಗೆ ಕರೆದೊಯ್ದು ಮಾರ್ಗಮಧ್ಯ ಅಪ್ರಾಪ್ತೆಯಿಂದ ಪತಿ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ರಾಪ್ತೆಯೊಬ್ಬಳು ಪ್ರಿಯತಮನ ಸ್ನೇಹಿತರ ಜೊತೆ ಸೇರಿಕೊಂಡು ಪತಿಯನ್ನು ಬಿಯರ್‌ ಬಾಟಲಿಯಿಂದ 36 ಬಾರಿ ಇರಿದು ಕೊಂದು, ವಿಡಿಯೋ ಕರೆ ಮಾಡಿ ತನ್ನ ಪ್ರೇಮಿಗೆ ತೋರಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ.

ಇಂದೋರ್‌: ಅಪ್ರಾಪ್ತೆಯೊಬ್ಬಳು ಪ್ರಿಯತಮನ ಸ್ನೇಹಿತರ ಜೊತೆ ಸೇರಿಕೊಂಡು ಪತಿಯನ್ನು ಬಿಯರ್‌ ಬಾಟಲಿಯಿಂದ 36 ಬಾರಿ ಇರಿದು ಕೊಂದು, ವಿಡಿಯೋ ಕರೆ ಮಾಡಿ ತನ್ನ ಪ್ರೇಮಿಗೆ ತೋರಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ.

ಏ.13ರಂದು ಇಂದೋರ್‌ ಬಳಿ ಪೊದೆಯಲ್ಲಿ ಮಾರಣಾಂತಿಕ ಗಾಯಗಳಿದ್ದ ರಾಹುಲ್‌ ಎಂಬಾತನ ಮೃತದೇಹ ಪತ್ತೆಯಾಗಿತ್ತು. ತನಿಖೆ ವೇಳೆ ಮೃತನ ಪತ್ನಿ ನಾಪತ್ತೆಯಾಗಿದ್ದ ಮತ್ತು ಆಕೆಗೆ ಪ್ರಿಯಕರ ಇದ್ದ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯಕರನನ್ನು ವಿಚಾರಣೆ ನಡೆಸಿದಾಗ ಆತ ಹತ್ಯೆ ವಿಷಯ ಒಪ್ಪಿಕೊಂಡಿದ್ದಾನೆ.

ಏನಿದು ಘಟನೆ?:

ಏ.12ರ ರಾತ್ರಿ ಶಾಪಿಂಗ್‌ಗೆಂದು ಪತಿ ರಾಹುಲ್‌ನನ್ನು ಕರೆದೊಯ್ದಿದ್ದ ಪತ್ನಿ, ಯೋಜನೆಯಂತೆ ಮಾರ್ಗಮಧ್ಯೆ ತನ್ನ ಚಪ್ಪಲಿ ಬೀಳಿಸಿ, ಅದನ್ನು ತೆಗೆದುಕೊಂಡು ಬರುವ ನೆಪದಲ್ಲಿ ಗಾಡಿ ನಿಲ್ಲಿಸುವಂತೆ ಸೂಚಿಸಿದ್ದಳು. ಈ ವೇಳೆ ಅಲ್ಲೇ ಅವಿತುಕೊಂಡಿದ್ದ ಆಪ್ರಾಪ್ತೆಯನ ಪ್ರಿಯಕರನ ಸ್ನೇಹಿತರು ರಾಹಲ್‌ನ ಎಳೆದೊಯ್ದಿದ್ದರು. ಅಲ್ಲಿ ಆರೋಪಿ ಬಾಲಕಿ ಪತಿಯ ತಲೆಗೆ ಬಿಯರ್ ಬಾಟಲ್‌ನಿಂದ ಹೊಡೆದು, ಬಳಿಕ ಅದರಿಂದಲೇ 36 ಬಾರಿ ಇರಿದು ಪತಿ ಹತ್ಯೆ ಮಾಡಿ ಪರಾರಿಯಾಗಿದ್ದಳು. ಬಳಿಕ ಘಟನಾ ಸ್ಥಳದಿಂದಲೇ ಪ್ರಿಯಕರನಿಗೆ ಕರೆ ಮಾಡಿ ಕೆಲಸ ಆಯಿತು ಎಂದು ಸಂಭ್ರಮಿಸಿದ್ದಾಳೆ.