ಸಾರಾಂಶ
ಪಾರಿವಾಳಗಳಿಂದಾಗಿ ಅಲರ್ಜಿ, ಉಸಿರಾಟದ ತೊಂದರೆ, ಶ್ವಾಸಕೋಶದ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ನಗರದಲ್ಲಿದ್ದ 51 ಪಾರಿವಾಳ ಆಹಾರ ಕೇಂದ್ರಗಳನ್ನು ಮುಚ್ಚುವಂತೆ ಮಹಾರಾಷ್ಟ್ರ ಸರ್ಕಾರವು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ಗೆ ನಿರ್ದೇಶನ ನೀಡಿದೆ.
ಮುಂಬೈ: ಪಾರಿವಾಳಗಳಿಂದಾಗಿ ಅಲರ್ಜಿ, ಉಸಿರಾಟದ ತೊಂದರೆ, ಶ್ವಾಸಕೋಶದ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ನಗರದಲ್ಲಿದ್ದ 51 ಪಾರಿವಾಳ ಆಹಾರ ಕೇಂದ್ರಗಳನ್ನು ಮುಚ್ಚುವಂತೆ ಮಹಾರಾಷ್ಟ್ರ ಸರ್ಕಾರವು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ಗೆ ನಿರ್ದೇಶನ ನೀಡಿದೆ.
ಈ ಆಹಾರ ಕೇಂದ್ರಗಳಿಂದ ಪಾದಚಾರಿ ಮಾರ್ಗಗಳೆಲ್ಲ ಪಾರಿವಾಳಗಳಿಂದಲೇ ತುಂಬಿಕೊಳ್ಳುತ್ತಿವೆ. ಪಾರಿವಾಳದ ಹಿಕ್ಕೆ ಹಾಗೂ ಗರಿಗಳಿಂದ ಮನುಷ್ಯನಿಗೆ ಶ್ವಾಸಕೋಶದ ಸೋಂಕು, ಹಕ್ಕಿ ಜ್ವರ, ಆಹಾರ ಸಂಬಂಧಿ ಸಮಸ್ಯೆಗಳು, ಅಲರ್ಜಿ, ಉಸಿರಾಟದ ತೊಂದರೆ ಸೇರಿ ಹಲವು ರೋಗಗಳು ಹರಡುತ್ತಿವೆ. ಕೂಡಲೇ ಪಾರಿವಾಳ ಆಹಾರ ಕೇಂದ್ರಗಳನ್ನು ಮುಚ್ಚಬೇಕು ಎಂದು ಶಿವಸೇನಾ (ಯುಬಿಟಿ) ಶಾಸಕಿ ಮನಿಷಾ ಕಾಯಂಡೆ ಮೊದಲಾದ ನಾಯಕರು ವಿನಂತಿಸಿದ್ದರು. ಈ ಹಿನ್ನೆಲೆ ಕೇಂದ್ರಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ.