ಕಾವೇರಿ ನದಿ ಪಾತ್ರದಲ್ಲಿದ್ದ ಪಾರಿವಾಳ ಹಿಡಿದ ಮೊಸಳೆ

| Published : May 23 2024, 01:09 AM IST

ಸಾರಾಂಶ

ಕಾವೇರಿ ನದಿಯ ನೀರಲ್ಲಿ ಅಡಗಿ ಕುಳಿತಿದ್ದ ಮೊಸಳೆಯೊಂದು ನದಿ ಪಾತ್ರಕ್ಕೆ ಆಹಾರ ಅರಸಿ ಬಂದ ಪಾರಿವಾಳವೊಂದನ್ನು ಯಡಕುರಿಯಾ ನದಿ ಪಾತ್ರದಲ್ಲಿ ಬೇಟೆಯಾಡಿರುವ ದೃಶ್ಯ ಈಗ ವೈರಲ್ ಆಗಿದೆ.

ನದಿಪಾತ್ರದಲ್ಲಿನ ದೃಶ್ಯ ಸೆರೆ ಹಿಡಿದ ಯುವಕ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕಾವೇರಿ ನದಿಯ ನೀರಲ್ಲಿ ಅಡಗಿ ಕುಳಿತಿದ್ದ ಮೊಸಳೆಯೊಂದು ನದಿ ಪಾತ್ರಕ್ಕೆ ಆಹಾರ ಅರಸಿ ಬಂದ ಪಾರಿವಾಳವೊಂದನ್ನು ಯಡಕುರಿಯಾ ನದಿ ಪಾತ್ರದಲ್ಲಿ ಬೇಟೆಯಾಡಿರುವ ದೃಶ್ಯ ಈಗ ವೈರಲ್ ಆಗಿದೆ.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಜಿಪಂ ವ್ಯಾಪ್ತಿಯ ಗ್ರಾಮದ ಯಡಕುರಿಯ ಸಮೀಪದಲ್ಲಿರುವ ಕಾವೇರಿ ನದಿ ತಟದಲ್ಲಿ ಪಾರಿವಾಳವನ್ನು ಮೊಸಳೆಯೊಂದು ದಿಡೀರ್ ಪ್ರತ್ಯಕ್ಷವಾಗಿ ನೀರೊಳಗೆ ಎಳೆದುಕೊಂಡು ಹೋಗಿರುವ ದೃಶ್ಯ ಕಳೆದ ಭಾನುವಾರ ನಡೆದಿದ್ದು, ಈ ದೃಶ್ಯ ಸೆರೆ ಹಿಡಿದ ಯುವಕ ಅರುಣ್ ಎಂಬಾತ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ಮೊದಲು ಕೊಕ್ಕರೆಯನ್ನು ಹಿಡಿಯಲು ಬಂದ ಮೊಸಳೆ ವಿಫಲವಾಯಿತು. ಬಳಿಕ ನದಿ ಪಾತ್ರದಲ್ಲಿ ಅಡಗಿ ಕುಳಿತ ಮೊಸಳೆ ಮೂರು ಪಾರಿವಾಳಗಳು ನದಿಯಲ್ಲಿ ನೀರು ಕುಡಿದು ಆಟವಾಡುವ ವೇಳೆ ದಿಡೀರ್ ಬಂದ ಮೊಸಳೆ ಪಾರಿವಾಳವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮೊಸಳೆಯು ಪಾರಿವಾಳವನ್ನು ಹಿಡಿಯುತ್ತಿದ್ದಂತೆ ಅಲ್ಲಿಯೇ ಇದ್ದ 2 ಪಾರಿವಾಳಗಳು ಭಯದಿಂದ ಹಾರಿಹೋಗಿರುವ ದೃಶ್ಯಗಳು ವೈರಲ್ ಆಗಿವೆ.

ಒಟ್ಟಾರೆ ಕಾವೇರಿ ನದಿ ಪಾತ್ರದಲ್ಲಿ ಮೊಸಳೆ ಇರುವುದು ಇದರಿಂದ ಬೆಳಕಿಗೆ ಬಂದಿದ್ದು ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ ನದಿ ಪಾತ್ರದಲ್ಲಿರುವ ಜನರು ಸಹಾ ಮೊಸಳೆ ಇರುವುದು ಖಾತ್ರಿಯಾದ ಹಿನ್ನೆಲೆ ಜಾಗ್ರತೆಯಿಂದ ಇರಬೇಕಿದೆ ಎಂದು ಎಚ್ಚರಿಸಿದ್ದಾರೆ.