ರಾಜಕೀಯ ಕೇವಲ ಹಣವಂತರಿಗೆ, ಪ್ರಭಾವಿಗಳಿಗೆ ಮಾತ್ರ ಎನ್ನುವ ಹೊತ್ತಿನಲ್ಲಿ ಜೀವನಕ್ಕಾಗಿ ಅವರಿವರ ಮನೆ ಪಾತ್ರೆ ತಿಕ್ಕುತ್ತಿದ್ದ ಬಡ ಮಹಿಳೆಯೊಬ್ಬರು ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.
ಎಲ್ಲರ ಮನೆ ಕೆಲಸ ಮಾಡುತ್ತಿದ್ದ ನನಗೆ ಜನರ ಸಮಸ್ಯೆ ಅರಿವಿದೆ. ರಸ್ತೆ, ಕುಡಿಯುವ ನೀರು, ಮಹಿಳೆಯರಿಗೆ ಭದ್ರತೆ, ಯುವಕರಿಗೆ ಉದ್ಯೋಗ ನನ್ನ ಆದ್ಯತೆಯಾಗಿರಲಿದೆ.ಕಲಿತಾ ಮಾಝಿ, ಬಿಜೆಪಿ ಶಾಸಕಿ
==ಕೋಲ್ಕತಾ: ರಾಜಕೀಯ ಕೇವಲ ಹಣವಂತರಿಗೆ, ಪ್ರಭಾವಿಗಳಿಗೆ ಮಾತ್ರ ಎನ್ನುವ ಹೊತ್ತಿನಲ್ಲಿ ಜೀವನಕ್ಕಾಗಿ ಅವರಿವರ ಮನೆ ಪಾತ್ರೆ ತಿಕ್ಕುತ್ತಿದ್ದ ಬಡ ಮಹಿಳೆಯೊಬ್ಬರು ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.
ಕೆಲವೇ ವರ್ಷಗಳ ಹಿಂದಿನವರೆಗೂ 4 ಮನೆಗಳಲ್ಲಿ ಪಾತ್ರೆ ತಿಕ್ಕಿ ಮಾಸಿಕ ಕೇವಲ 2500 ರು. ಸಂಪಾದಿಸುತ್ತಿದ್ದ ಕಲಿತಾ ಮಾಝಿ ಇದೀಗ ಆಸ್ಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 107692 ಮತಗಳನ್ನು ಪಡೆಯುವ ಮೂಲಕ ಟಿಎಂಸಿಯ ಶ್ಯಾಮಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದ್ದಾರೆ.ಯಾರೀಕೆ?: ಗುಸ್ಕಾರ ಪುರಸಭೆಯ ನಿವಾಸಿಯಾದ ಮಾಝಿ, ರಾಜಕೀಯಕ್ಕೆ ಪ್ರವೇಶಿಸುವ ಮೊದಲು 4 ಮನೆಗಳಲ್ಲಿ ಪಾತ್ರೆ ತಿಕ್ಕುವ ಕೆಲಸ ಮಾಡುತ್ತಿದ್ದರು. 2021 ರಲ್ಲಿ ಬಿಜೆಪಿ ಇವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿತ್ತು. ಆದರೆ ತೃಣಮೂಲ ಕಾಂಗ್ರೆಸ್‌ನ ಅಭೇದಾನಂದ ಥಂಡರ್ ವಿರುದ್ಧ 11,815 ಮತಗಳಿಂದ ಸೋತಿದ್ದರು. ಆಗಿನಿಂದಲೂ ಸ್ವಲ್ಪ ರಾಜಕೀಯದ ನಂಟು ಉಳಿಸಿಕೊಂಡಿದ್ದ ಕಲಿತಾಗೆ ಬಿಜೆಪಿ ಈ ಬಾರಿ ಮತ್ತೆ ಟಿಕೆಟ್ ನೀಡಿತ್ತು. ಈ ಬಾರಿ ಲಲಿತಾಗೆ ಅದೃಷ್ಟ ಒಲಿದುಬಂದಿದ್ದು ಅವರನ್ನು ನೇರವಾಗಿ ವಿಧಾನಸಭೆಗೆ ಕಳುಹಿಸಿಕೊಟ್ಟಿದೆ.ಮೋದಿಗೆ ಅರ್ಪಣೆ:
ನನ್ನ ಮೇಲೆ ವಿಶ್ವಾಸವಿಟ್ಟು ಎರಡನೇ ಬಾರಿ ಸ್ಪರ್ಧಿಸಲು ಬಿಜೆಪಿ ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಈ ಗೆಲುವನ್ನು ನಾನು ಪ್ರಧಾನಿ ಮೋದಿಗೆ ಅರ್ಪಿಸುತ್ತೇನೆ ಎಂದು ಕಲಿತಾ ಹೇಳಿದ್ದಾರೆ.==