ಸಾರಾಂಶ
ತಾವು ಯಾವುದೇ ಮೈತ್ರಿಕೂಟವನ್ನು ಸೇರಿಲ್ಲ ಎಂದು ಎಂಎನ್‌ಎಂ ಪಕ್ಷದ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದು, ಸ್ವಾರ್ಥರಹಿತ ಮತ್ತು ಜೀತ ಸಂಸ್ಕೃತಿಯನ್ನು ತ್ಯಜಿಸಿರುವಂತಹ ಮೈತ್ರಿಕೂಟವನ್ನು ತಾವು ಸೇರಲು ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಚೆನ್ನೈ: ನಾವು ಇಂಡಿಯಾ ಮೈತ್ರಿಕೂಟ ಸೇರಿಲ್ಲ. ಸ್ವಾರ್ಥರಹಿತವಾಗಿ ರಾಷ್ಟ್ರದ ಅಭಿವೃದ್ಧಿಯ ಕುರಿತು ಚಿಂತಿಸುವ ಮೈತ್ರಿಕೂಟಕ್ಕೆ ತಮ್ಮ ಎಂಎನ್‌ಎಂ ಪಕ್ಷ ಬೆಂಬಲ ನೀಡುವುದಾಗಿ ಪಕ್ಷದ ಸ್ಥಾಪಕ, ನಟ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಮಕ್ಕಳ್ ನೀಧಿ ಮೈಯ್ಯಂ(ಎಂಎನ್‌ಎಂ) ಪಕ್ಷದ ಏಳನೇ ವಾರ್ಷಿಕೋತ್ಸವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್, ‘ನಾವು ಪಕ್ಷಗಳ ಕುರಿತು ಚಿಂತಿಸುವುದನ್ನು ಬಿಟ್ಟು ರಾಷ್ಟ್ರದ ಕುರಿತು ಒಗ್ಗಟ್ಟಾಗಿ ಚಿಂತಿಸಬೇಕು.
ಹಾಗಾಗಿ ಸ್ವಾರ್ಥರಹಿತವಾಗಿ ರಾಷ್ಟ್ರದ ಕುರಿತು ಚಿಂತಿಸುವ ಮತ್ತು ಜೀತ ಪದ್ಧತಿಯನ್ನು ತ್ಯಜಿಸಿರುವಂತಹ ಮೈತ್ರಿಕೂಟಕ್ಕೆ ತಮ್ಮ ಪಕ್ಷ ಬೆಂಬಲ ನೀಡುತ್ತದೆ’ ಎಂದು ತಿಳಿಸಿದರು.