ಸಾರಾಂಶ
/7
ಚಂಡೀಗಢ: ನಟಿ ಹಾಗೂ ಸಂಸದೆ ಕಂಗನಾ ರಾಣಾವತ್ ಅವರಿಗೆ ಕಳೆದು ತಿಂಗಳು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿ ಕೆಲಸದಿಂದ ಅಮಾನತುಗೊಂಡಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಕುಲ್ವಿಂದರ್ ಸೇವೆಗೆ ಮರಳಿದ್ದು, ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.
ಬೆಂಗಳೂರಿನ 10ನೇ ರಿಸರ್ವ್ ಬೆಟಾಲಿಯನ್‌ಗೆ ಕೌರ್‌ರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಅವರ ವಿರುದ್ಧ ತನಿಖೆ ಮುಂದುವರಿಯಲಿದೆ ಎಂದು ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರದ ವಿರುದ್ಧ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು 100-200 ರು. ನೀಡಿ ಕರೆತರಲಾಗಿತ್ತು ಕಂಗನಾ ನೀಡಿದ್ದ ಹೇಳಿಕೆಯಿಂದ ಕುಪಿತಳಾಗಿದ್ದ ಕೌರ್ ಆಕೆಯ ಮೇಲೆ ಕೈಮಾಡಿದ್ದರು. ಏಕೆಂದರೆ ರೈತರ ಪ್ರತಿಭಟನೆಯಲ್ಲಿ ಕೌರ್ ತಾಯಿ ಕೂಡ ಭಾಗಿ ಆಗಿದ್ದರು.
ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡಿದ್ದಕ್ಕೆ) ಹಾಗೂ 341 (ತಪ್ಪಾದ ಸಂಯಮ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಂಗನಾ ನೀಡಿದ ದೂರಿನ ಮೇರೆಗೆ ಆಕೆಯನ್ನು ಬಂಧಿಸಿ ನಂತರ ಕೆಲಸದಿಂದ ಅಮಾನತು ಮಾಡಲಾಗಿತ್ತು.