ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಿತವ್ಯಯ ಘೋಷಣೆಗೆ ಬೆಂಬಲಿಸಿರುವ ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಈಗ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧಕ್ಕಿಳಿಸಿದ್ದಾರೆ

- ಬೆಂಗಾವಲು ವಾಹನ ಸಂಖ್ಯೆ ಅರ್ಧ ಕಡಿತ

- 9ರ ಬದಲು 4 ವಾಹನಗಳು ಮಾತ್ರ ಬಳಕೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಿತವ್ಯಯ ಘೋಷಣೆಗೆ ಬೆಂಬಲಿಸಿರುವ ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಈಗ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧಕ್ಕಿಳಿಸಿದ್ದಾರೆ.

ಈ ಮೊದಲು ರಾಜ್ಯಪಾಲ ಗೆಹಲೋತ್ ಅವರಿಗೆ ಅಂಬ್ಯುಲೆನ್ಸ್‌ ಸೇರಿದಂತೆ ಒಟ್ಟು 9 ಬೆಂಗಾವಲು ವಾಹನಗಳಿದ್ದವು. ಮಧ್ಯಪ್ರಾಚ್ಯ ಕದನದ ಕಾರಣ ತೈಲದ ತತ್ವಾರ ಉಂಟಾಗಿರುವ ಕಾರಣ, ಪ್ರಧಾನ ಮಂತ್ರಿ ಅವರು ಇಂಧನ ಮಿತ ಬಳಕೆಗೆ ಇತ್ತೀಚೆಗೆ ಕರೆ ನೀಡಿದ್ದರು ಹಾಗೂ ಖುದ್ದು ಬೆಂಗಾವಲು ವಾಹನಗಳ ಸಂಖ್ಯೆಯನ್ನು ಇಳಿಸಿಕೊಂಡಿದ್ದರು. ಅವರ ಘೋಷಣೆಗೆ ಬೆಂಬಲಿಸಿ ರಾಜ್ಯಪಾಲ ಗೆಹಲೋತ್ ಅವರು, ತಮ್ಮ ಬೆಂಗಾವಲಿಗೆ ಗುರುವಾರದಿಂದ 4 ವಾಹನಗಳನ್ನು ಮಾತ್ರ ಬಳಸಲು ಆರಂಭಿಸಿದ್ದಾರೆ.

ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ರಾಜ್ಯಪಾಲರು ವಿಡಿಯೋ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ.

__

ಕಳೆದ 2 ದಿನಗಳಿಂದ ಮೋದಿ ಅವರ ಕರೆಯ ಅನುಸಾರ ಅನೇಕ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು ಬೆಂಗಾವಲು ವಾಹನ ಕಡಿತ ಸೇರಿ ಅನೇಕ ಮಿತವ್ಯಯ ಕ್ರಮಗಳನ್ನು ಕೈಗೊಂಡಿದ್ದಾರೆ.