ಇಂದು ಅಯೋಧ್ಯೆ ರಾಮಮಂದಿರಕ್ಕೆ ಅರವಿಂದ್‌ ಕೇಜ್ರಿವಾಲ್‌, ಭಗವಂತ್‌ ಸಿಂಗ್‌ ಮಾನ್‌ ಭೇಟಿ

| Published : Feb 12 2024, 01:38 AM IST / Updated: Feb 12 2024, 07:42 AM IST

Arvind Kejriwal
ಇಂದು ಅಯೋಧ್ಯೆ ರಾಮಮಂದಿರಕ್ಕೆ ಅರವಿಂದ್‌ ಕೇಜ್ರಿವಾಲ್‌, ಭಗವಂತ್‌ ಸಿಂಗ್‌ ಮಾನ್‌ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಟುಂಬ ಸಮೇತ ಪಂಜಾಬ್‌, ದಿಲ್ಲಿ ಸಿಎಂ ಅಯೋಧ್ಯೆ ರಾಮಮಂದಿರಕ್ಕೆ ಪ್ರವಾಸ ತೆರಳಲಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷ ಸ್ಪಷ್ಟಪಡಿಸಿದೆ.

ನವದೆಹಲಿ: ಆಮ್ಆದ್ಮಿ ಪಕ್ಷದ ನೇತಾರ, ದೆಹಲಿ ಮುಖ್ಯಮಂತ್ರಿ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಕುಟುಂಬ ಸಮೇತ ಸೋಮವಾರ ಅಯೋಧ್ಯಾ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜ.22ರಂದು ನಡೆದ ಪ್ರಾಣಪ್ರತಿಷ್ಠಾಪನೆಗೆ ಆಹ್ವಾನ ದೊರೆತಿದ್ದರೂ ನಂತರ ಕುಟುಂಬ ಸಮೇತ ಭೇಟಿ ನೀಡುವುದಾಗಿ ತಿಳಿಸಿದ್ದರು. 

ಈ ಹಿನ್ನೆಲೆಯಲ್ಲಿ ಲೋಕಾರ್ಪಣೆಯಾದ ಮೂರು ವಾರಗಳ ಬಳಿಕ ಉಭಯ ಕುಟುಂಬಗಳು ರಾಮಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಉತ್ತರ ಪ್ರದೇಶ 325 ಶಾಸಕರಿಂದ ಭೇಟಿ: ಈ ನಡುವೆ ಭಾನುವಾರ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಶಾಸಕರನ್ನು ಹೊರತುಪಡಿಸಿ ಉಭಯ ಸದನಗಳ 325 ಶಾಸಕರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಅಯೋಧ್ಯೆಗೆ ಬಸ್‌ಗಳಲ್ಲಿ ತೆರಳಿ ಬಾಲರಾಮನ ದರ್ಶನ ಪಡೆದಿದ್ದಾರೆ.