ಕೇಜ್ರಿ ಬೆಂಬಲಕ್ಕೆ ಪತ್ನಿ ಸುನಿತಾ ವಾಟ್ಸಪ್‌ ಅಭಿಯಾನ

| Published : Mar 30 2024, 12:52 AM IST

ಕೇಜ್ರಿ ಬೆಂಬಲಕ್ಕೆ ಪತ್ನಿ ಸುನಿತಾ ವಾಟ್ಸಪ್‌ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯ ಲೈಸೆನ್ಸ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ್‌ ಕೇಜ್ರಿವಾಲ್‌ರನ್ನು ಬೆಂಬಲಿಸುವಂತೆ ಅವರ ಪತ್ನಿ ಸುನಿತಾ ವಾಟ್ಸಪ್‌ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ನವದೆಹಲಿ: ಮದ್ಯ ಲೈಸೆನ್ಸ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ್‌ ಕೇಜ್ರಿವಾಲ್‌ರನ್ನು ಬೆಂಬಲಿಸುವಂತೆ ಅವರ ಪತ್ನಿ ಸುನಿತಾ ವಾಟ್ಸಪ್‌ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಕೇಜ್ರಿವಾಲ್‌ಗೆ ಆಶೀರ್ವಾದ ಎನ್ನುವ ಹೆಸರಿನಲ್ಲಿ ಅಭಿಯಾನ ಪ್ರಾರಂಭಿಸಿದ್ದು, ಸಾರ್ವಜನಿಕರು 8297324624/9700297002 ಗೆ ವಾಟ್ಸಪ್‌ ಮೂಲಕ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಂದೇಶವನ್ನು ಕಳುಹಿಸಬಹುದು. ಅವರು ಸ್ವಾತಂತ್ರ್ಯ ಯೋಧರಂತೆ ದೇಶದ ಭ್ರಷ್ಟ ಮತ್ತು ಸರ್ವಾಧಿಕಾರಿಗಳ ವಿರುದ್ಧ ದಿಟ್ಟತನದಿಂದ ಹೋರಾಡುತ್ತಿದ್ದಾರೆ. ಅವರ ಬಿಡುಗಡೆಗೆ ಕೆಲವರು ಉಪವಾಸ ಮಾಡುತ್ತಿದ್ದಾರೆಂದೂ ತಾವು ಕೇಳಲ್ಪಟ್ಟಿದ್ದು, ಅಂತಹ ವಿಷಯಗಳನ್ನು ಈ ನಂಬರ್‌ಗೆ ವಾಟ್ಸಪ್‌ ಮಾಡಿ ಹಂಚಿಕೊಳ್ಳಿ ಎಂದು ಸುನಿತಾ ಕರೆ ನೀಡಿದ್ಧಾರೆ.