ಕೇರಳ: ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಸಾಲ ಮನ್ನಾ : ಸಹಕಾರಿ ಸ್ವಾಮ್ಯದ ಕೇರಳ ಬ್ಯಾಂಕ್‌

| Published : Aug 13 2024, 12:54 AM IST / Updated: Aug 13 2024, 08:18 AM IST

ಸಾರಾಂಶ

ಭೂಕುಸಿತ ಪೀಡಿತ ಪ್ರದೇಶಗಳಾದ ಮುಂಡಕ್ಕೈ ಮತ್ತು ಚೂರಲ್‌ಮಲೆಯ ತನ್ನ ಶಾಖೆಗಳಲ್ಲಿನ ಸಾಲ ಮನ್ನಾ ಮಾಡಲು ಸಹಕಾರಿ ಸ್ವಾಮ್ಯದ ಕೇರಳ ಬ್ಯಾಂಕ್‌ ಸೋಮವಾರ ನಿರ್ಧರಿಸಿದೆ. ಈ ಮೂಲಕ ಸಂತ್ರಸ್ತರಿಗೆ ಮಾನವೀಯತೆ ಆಧಾರದಲ್ಲಿ ಸಹಾಯಕ್ಕೆ ಮುಂದಾಗಿದೆ.

ತಿರುವನಂತಪುರಂ: ಭೂಕುಸಿತ ಪೀಡಿತ ಪ್ರದೇಶಗಳಾದ ಮುಂಡಕ್ಕೈ ಮತ್ತು ಚೂರಲ್‌ಮಲೆಯ ತನ್ನ ಶಾಖೆಗಳಲ್ಲಿನ ಸಾಲ ಮನ್ನಾ ಮಾಡಲು ಸಹಕಾರಿ ಸ್ವಾಮ್ಯದ ಕೇರಳ ಬ್ಯಾಂಕ್‌ ಸೋಮವಾರ ನಿರ್ಧರಿಸಿದೆ. ಈ ಮೂಲಕ ಸಂತ್ರಸ್ತರಿಗೆ ಮಾನವೀಯತೆ ಆಧಾರದಲ್ಲಿ ಸಹಾಯಕ್ಕೆ ಮುಂದಾಗಿದೆ.

ದುರಂತದಲ್ಲಿ ಮಡಿದವರ ಕುಟುಂಬದ ವಿವಿಧ ಸಾಲ, ಮನೆ, ಆಸ್ತಿ ಸಾಲಗಳನ್ನು ಮನ್ನಾ ಮಾಡಲು ನಿರ್ವಹಣಾ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬ್ಯಾಂಕ್‌ ಮುಖ್ಯಸ್ಥರು ಹೇಳಿದ್ದಾರೆ. ಎಷ್ಟು ಜನರ ಸಾಲ ಮನ್ನಾ ಆಗುತ್ತದೆ? ಸಾಲ ಮನ್ನಾದ ನಿಖರ ಪ್ರಮಾಣ ಎಷ್ಟು ಎಂಬುದನ್ನು ಬ್ಯಾಂಕ್‌ ಹೇಳಿಲ್ಲ.

ಆದರೆ ಕೇರಳ ಬ್ಯಾಂಕ್‌ ಸೇರಿ ವಿವಿಧ ಬ್ಯಾಂಕ್‌ಗಳಲ್ಲಿ ಈ ಭಾಗದ ಜನ ಸುಮಾರು 30 ಕೋಟಿ ರು. ಸಾಲ ಮಾಡಿದ್ದಾರೆ. ಇದರಲ್ಲಿ ಕೇರಳ ಬ್ಯಾಂಕ್‌ ಪಾಲು ಅಧಿಕ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರೊಂದಿಗೆ ಕೇರಳ ಬ್ಯಾಂಕ್‌ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 50 ಲಕ್ಷ ರು. ನೀಡಿದ್ದು, ಅದರ ಉದ್ಯೋಗಿಗಳೂ ಸಹ ತಮ್ಮ 5 ದಿನದ ಸಂಬಳವನ್ನು ನಿಧಿಗೆ ನೀಡಲು ಮುಂದಾಗಿದ್ದಾರೆ.

ಸರ್ಕಾರದ ಅಂಕಿ-ಸಂಶ ಪ್ರಕಾರ ಭೂಕುಸಿತ ದುರಂತದಲ್ಲಿ ಈವರೆಗೆ 229 ಮಂದಿ ಕಾಣೆಯಾಗಿದ್ದು, 130ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಉಳಿದವರು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.