ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಪಕ್ಷ (ಯುಡಿಎಫ್‌) ಭರ್ಜರಿ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ (ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌)ಕ್ಕೆ ಭಾರೀ ಹಿನ್ನಡೆಯಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆ: ಕೈ ನೇತೃತ್ವದ ಯುಡಿಎಫ್‌ಗೆ ಭರ್ಜರಿ ಗೆಲುವು

ತಿರುವನಂತಪುರ: ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಪಕ್ಷ (ಯುಡಿಎಫ್‌) ಭರ್ಜರಿ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ (ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌)ಕ್ಕೆ ಭಾರೀ ಹಿನ್ನಡೆಯಾಗಿದೆ.ಕೇರಳದ 6 ಮಹಾನಗರ ಪಾಲಿಕೆಗಳು, 14 ಜಿಲ್ಲಾ ಪಂಚಾಯಿತಿಗಳು, 86 ನಗರಸಭೆಗಳು, 152 ಬ್ಲಾಕ್‌ ಪಂಚಾಯತ್‌ಗಳು, 941 ಗ್ರಾಪಂಗಳಿಗೆ ಡಿ.9 ಮತ್ತು 11ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಇದರಲ್ಲಿ 6 ಮಹಾನಗರ ಪಾಲಿಕೆ ಪೈಕಿ 4ರಲ್ಲಿ, 86 ನಗರಪಾಲಿಕೆ ಪೈಕಿ 54ರಲ್ಲಿ ಯುಡಿಎಫ್‌ ಗೆಲುವು ಸಾಧಿಸಿದೆ. ಎಲ್‌ಡಿಎಫ್‌ 2 ಮಹಾನಗರ ಪಾಲಿಕೆ, 28 ನಗರಸಭೆಗೆ ತೃಪ್ತಿಪಟ್ಟುಕೊಂಡಿದೆ. ಇದಲ್ಲದೆ ಬ್ಲಾಕ್‌ ಪಂಚಾಯತ್‌ ಮತ್ತು ಗ್ರಾಮ ಪಂಚಾಯತ್‌ನಲ್ಲೂ ಯುಡಿಎಫ್‌ ಭಾರೀ ಮುನ್ನಡೆ ಸಾಧಿಸಿದೆ.

ಯುಡಿಎಫ್‌ನ ಈ ಭರ್ಜರಿ ಗೆಲುವು, ಸತತ 2ನೇ ಅವಧಿಗೆ ಅಧಿಕಾರ ಚಲಾಯಿಸುತ್ತಿರುವ ಎಲ್‌ಡಿಎಫ್‌ ವಿರುದ್ಧ ಜನರ ಆಡಳಿತ ವಿರೋಧಿ ಅಲೆಯ ಸೂಚಕ ಎಂದು ವಿಶ್ಲೇಷಿಸಲಾಗಿದೆ. ಜೊತೆಗೆ ಈ ಫಲಿತಾಂಶ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವಿನ ಕನಸಿಗೆ ಮತ್ತಷ್ಟು ಜೀವ ತುಂಬಲಿದೆ ಎನ್ನಲಾಗಿದೆ.