ಸ್ಥಳೀಯ ಎಂಜಿನಿಯರಿಂಗ್‌ ಕಾಲೇಜಿನ ಕ್ಯಾಂಪಸ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ ನಟಿ ಸನ್ನಿ ಲಿಯೋನ್‌ರ ಕಾರ್ಯಕ್ರಮಕ್ಕೆ ವಿವಿ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ.

ತಿರುವನಂತಪುರ: ಸ್ಥಳೀಯ ಎಂಜಿನಿಯರಿಂಗ್‌ ಕಾಲೇಜಿನ ಕ್ಯಾಂಪಸ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ ನಟಿ ಸನ್ನಿ ಲಿಯೋನ್‌ರ ಕಾರ್ಯಕ್ರಮಕ್ಕೆ ವಿವಿ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ. ಇಲ್ಲಿನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೆಟೆಕ್ ಫೆಸ್ಟ್‌ನ ಭಾಗವಾಗಿ ಜು.5 ರಂದು ಸನ್ನಿ ಲಿಯೋನ್ ಅವರ ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘ ಆಯೋಜಿಸಿತ್ತು. ಆದರೆ ಕಾಲೇಜು ಕ್ಯಾಂಪಸ್‌ನಲ್ಲಿ ಹೊರಗಿನವರ ಕಾರ್ಯಕ್ರಮ ಆಯೋಜನೆಗೊಂಡರೆ ಅದು ಕಾಲ್ತುಳಿತಕ್ಕೆ ಕಾರಣವಾಗುವ ಆತಂಕ ಇದೆ. ಹೀಗಾಗಿ ನಿಯಮಗಳ ಅನ್ವಯ ಅನುಮತಿ ನಿರಾಕರಿಸಲಾಗಿದೆ ಎಂದು ಕೇರಳ ವಿವಿ ತನ್ನ ನಿರ್ಧಾರ ಪ್ರಕಟಿಸಿದೆ.

==

ಚಿನ್ನ ಹೂಡಿಕೆ ಸ್ಕೀಂ ವಂಚನೆ: ಶಿಲ್ಪಾ ಶೆಟ್ಟಿ ವಿರುದ್ಧ ತನಿಖೆಗೆ ಮುಂಬೈ ಕೋರ್ಟ್‌ ಆದೇಶ 

ಮುಂಬೈ: ಹಣ ಹೂಡಿಕೆ ಮಾಡಿ ಚಿನ್ನ ಪಡೆಯುವ ಯೋಜನೆಯಲ್ಲಿ ವಂಚನೆ ಮಾಡಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್‌ ಕುಂದ್ರಾ, ಹಾಗೂ ಇನ್ನಿತರೆ ಮೂವರ ವಿರುದ್ಧ ತನಿಖೆ ನಡೆಸುವಂತೆ ಸ್ಥಳೀಯ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಮೇಲ್ನೋಟಕ್ಕೆ ಆರೋಪ ಕಾಣಿಸುತ್ತಿದೆ. ಈ ಕುರಿತು ತನಿಖೆ ಮಾಡಬೇಕು ಎಂದು ಕೋರ್ಟ್‌ ಹೇಳಿದೆ. 2019ರಲ್ಲಿ ಪೃಥ್ವಿರಾಜ್‌ ಕೊಠಾರಿ ಎಂಬುವರು ಶಿಲ್ಪಾ ಶೆಟ್ಟಿ ಅವರ ಕಂಪನಿಯಲ್ಲಿ 90 ಲಕ್ಷ ರು. ಹೂಡಿಕೆ ಮಾಡಿದ್ದರು. ಆದರೆ ಇದರ ಅವಧಿ ಪೂರ್ಣಗೊಂಡ ಬಳಿಕ ಹಣದ ಮೌಲ್ಯದಷ್ಟು ಚಿನ್ನವನ್ನು ಶಿಲ್ಪಾ ಶೆಟ್ಟಿ ಅವರ ಕಂಪನಿ ನೀಡಿಲ್ಲ. ಇದು ವಂಚಿಸಿದೆ ಎಂದು ಪ್ರಕರಣ ದಾಖಲಿಸಿದ್ದರು.