ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಸೆರೆಹಿಡಿದ ಕೆಲ ಚಿತ್ರಗಳನ್ನು ದೆಹಲಿಯ ಬಿಕಾನೇರ್ ಛಾಯಾಚಿತ್ರ ಪ್ರದರ್ಶನದಿಂದ ಹೊರಗಿಟ್ಟ ವಿಚಾರ ವಿವಾದ ಸೃಷ್ಟಿಸಿರುವ ನಡುವೆಯೇ, ರೈಹಾನ್ ಅವರ ಸಂಪೂರ್ಣ ಚಿತ್ರ ಪ್ರದರ್ಶನವನ್ನು ಕೇರಳಂನಲ್ಲಿ ಆಯೋಜಿಸುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಘೋಷಿಸಿದ್ದಾರೆ.
-ಬಿಕಾನೇರ್ ಪ್ರದರ್ಶನ ವಿವಾದದ ಬೆನ್ನಲ್ಲೇ ಸಿಎಂ ಸತೀಶನ್ ಆಮಂತ್ರಣ
-ಮಲಯಾಳಿ ಹುಡುಗರ ಮೇಲೆ ದಾಳಿ, ರೈಹಾನ್‌ಗೆ ಆದ್ಯತೆ: ಆರ್‌ಸಿ ಕಿಡಿ ಪಿಟಿಐ ತಿರುವನಂತಪುರಂಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಸೆರೆಹಿಡಿದ ಕೆಲ ಚಿತ್ರಗಳನ್ನು ದೆಹಲಿಯ ಬಿಕಾನೇರ್ ಛಾಯಾಚಿತ್ರ ಪ್ರದರ್ಶನದಿಂದ ಹೊರಗಿಟ್ಟ ವಿಚಾರ ವಿವಾದ ಸೃಷ್ಟಿಸಿರುವ ನಡುವೆಯೇ, ರೈಹಾನ್ ಅವರ ಸಂಪೂರ್ಣ ಚಿತ್ರ ಪ್ರದರ್ಶನವನ್ನು ಕೇರಳಂನಲ್ಲಿ ಆಯೋಜಿಸುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಘೋಷಿಸಿದ್ದಾರೆ. ಇದಕ್ಕೆ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಟ್ವೀಟ್ ಮಾಡಿರುವ ಸತೀಶನ್, ‘ರೈಹಾನ್ ಅವರ ನೋ ಐಡಿಯಾ ಈಸ್ ಫೈನಲ್ ಪ್ರದರ್ಶನವನ್ನು ಸಂಪೂರ್ಣವಾಗಿ ಆಯೋಜಿಸಲು ಕೇರಳವು ಸಂತೋಷ ಮತ್ತು ಹೆಮ್ಮೆಪಡುತ್ತದೆ. ಯಾವುದೇ ನಿರಾಕರಣೆಯಿಲ್ಲ, ಯಾವುದೇ ಹೊರಗಿಡುವಿಕೆಯಿಲ್ಲ’ ಎಂದಿದ್ದಾರೆ. ಸತೀಶನ್ ಹೇಳಿಕೆಗೆ ಕಿಡಿ ಕಾರಿರುವ ರಾಜೀವ್ ಚಂದ್ರಶೇಖರ್, ‘ಇತರ ಮಲಯಾಳಿ ಯುವಕರು ಶಾಂತಿಯುತವಾಗಿ ಪ್ರತಿಭಟಿಸಿದಾಗ ಸಿಎಂ ಸೂಚನೆಯ ಮೇರೆಗೆ ಪೊಲೀಸರು ಅಶ್ರುವಾಯು ಪ್ರಯೋಗ, ಗ್ಯಾಸ್ ಗ್ರೆನೇಡ್ ದಾಳಿ ನಡೆಸುತ್ತಿದ್ದಾರೆ. ಹೀಗಿದ್ದಾಗ ವಯನಾಡ್ ಸಂಸದೆ ಪ್ರಿಯಾಂಕಾ ಅವರ ಪುತ್ರನಿಗೆ ವಿಶೇಷ ಆದ್ಯತೆ ಕೊಡುವುದು ತಪ್ಪು’ ಎಂದಿದ್ದಾರೆ.