ರಾಮಮಂದಿರ ದೇಣಿಗೆ ಲೂಟಿ ಬಗ್ಗೆ ಸದನದಲ್ಲಿ ಮಾತನಾಡಲು ಹಿಂದೇಟು ಹಾಕಿ, ‘ಅದನ್ನು ರಾಜ್ಯದ ವಿಚಾರ’ ಎನ್ನುತ್ತಿರುವ ಕೇಂದ್ರದ ವಿರುದ್ಧ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಹರಿಹಾಯ್ದಿದ್ದಾರೆ.

ನವದೆಹಲಿ: ರಾಮಮಂದಿರ ದೇಣಿಗೆ ಲೂಟಿ ಬಗ್ಗೆ ಸದನದಲ್ಲಿ ಮಾತನಾಡಲು ಹಿಂದೇಟು ಹಾಕಿ, ‘ಅದನ್ನು ರಾಜ್ಯದ ವಿಚಾರ’ ಎನ್ನುತ್ತಿರುವ ಕೇಂದ್ರದ ವಿರುದ್ಧ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಹರಿಹಾಯ್ದಿದ್ದಾರೆ.

ಚುನಾವಣೆಗಾಗಿ ರಾಮಮಂದಿರ ವಿಷಯವನ್ನು ಲಾಭಕ್ಕೆ

‘ಲೋಕಸಭೆ ಚುನಾವಣೆಗಾಗಿ ರಾಮಮಂದಿರ ವಿಷಯವನ್ನು ಲಾಭಕ್ಕೆ ಬಳಸಿಕೊಂಡ ಬಿಜೆಪಿಗೆ ಆಗ ಇದು ರಾಜ್ಯದ ವಿಷಯ ಆಗಿರಲಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ಸಂಸತ್‌ ಆವರಣದಲ್ಲಿ ಮಾತನಾಡಿರುವ ಅವರು, ‘ಜನರು ನಂಬಿಕೆಯಿಂದ ರಾಮ ಮಂದಿರಕ್ಕೆ ದೇಣಿಗೆ ನೀಡಿದರು. ಭಾರತದಲ್ಲಿ ಮಾತ್ರವಲ್ಲದೇ ಮಲೇಷ್ಯಾ, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್‌ ಸೇರಿದಂತೆ ಇತರ ಕಡೆಗಳಲ್ಲಿಯೂ ರಾಮನ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಆದರೆ ನೀವು ಇದನ್ನು ರಾಜ್ಯದ ವಿಷಯ ಎಂದು ಹೇಳುತ್ತಿದ್ದೀರಿ. ಚುನಾವಣೆಗೂ ಮುನ್ನ ರ್‍ಯಾಲಿಗಳ ಮೂಲಕ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವಾಗ ಇದು ರಾಜ್ಯದ ವಿಷಯವಾಗಿಲಿಲ್ಲ. ಈಗ ಅದು ರಾಜ್ಯದ ವಿಷಯವಾಗಿದೆ’ ಎಂದು ಟೀಕಿಸಿದರು.

ದೇಶಕ್ಕೆ ಪ್ರಧಾನಿ

‘ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರವನ್ನು ಉದ್ಘಾಟಿಸಿದರು. ಅವರು ರಾಜ್ಯದ ಪ್ರಧಾನಿ ಅಲ್ಲ. ಇಡೀ ದೇಶಕ್ಕೆ ಪ್ರಧಾನಿ. ಉದ್ಘಾಟನೆಗಾಗಿ ದೇಶಾದ್ಯಂತ ಜನರು ಬಂದಿದ್ದರು. ದೇಣಿಗೆಗಳು ಮಾಯಾವಾಗಿವೆ, ಈಗ ರಾಜ್ಯದ ವಿಷಯ ಎನ್ನುತ್ತಿದ್ದಾರೆ’ ಎಂದಯ ಕಿಡಿಕಾರಿದರು.