ಸಾರಾಂಶ
ನೀಟ್ ಕುರಿತು ಚರ್ಚೆಗೆ ಆಗ್ರಹಿಸಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನದ ಬಾವಿಗೆ (ಸ್ಪೀಕರ್ ಎದುರಿನ ಜಾಗ) ನುಗ್ಗಿ, ಸ್ಪೀಕರ್ ಅವರಿಗೇ ತರಾಟೆಗೆ ತೆಗೆದುಕೊಂಡ ಅಪರೂಪದ ಪ್ರಸಂಗ ಶುಕ್ರವಾರ ನಡೆಯಿತು.
ನವದೆಹಲಿ: ನೀಟ್ ಕುರಿತು ಚರ್ಚೆಗೆ ಆಗ್ರಹಿಸಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನದ ಬಾವಿಗೆ (ಸ್ಪೀಕರ್ ಎದುರಿನ ಜಾಗ) ನುಗ್ಗಿ, ಸ್ಪೀಕರ್ ಅವರಿಗೇ ತರಾಟೆಗೆ ತೆಗೆದುಕೊಂಡ ಅಪರೂಪದ ಪ್ರಸಂಗ ಶುಕ್ರವಾರ ನಡೆಯಿತು.
ನೀಟ್ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಕೋಲಾಹಲ ಆರಂಭಿಸಿದಾಗ ಖರ್ಗೆ ಅವರೂ ಸದನದ ಬಾವಿಗೆ ಬಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಧನಕರ್, ‘ಪ್ರತಿಪಕ್ಷ ನಾಯಕರು ಹಿಂದೆಂದೂ ಬಾವಿಗೆ ಕಾಲಿಟ್ಟಿಲ್ಲ. ಇದು ಆಘಾತಕರ ಹಾಗೂ ನೋವಿನ ವಿಚಾರ’ ಎಂದರು.
ಇದಕ್ಕೆ ಖರ್ಗೆ ತಿರುಗೇಟು ನೀಡಿ, ‘ನಾನು ವಿಷಯ ಪ್ರಸ್ತಾಪಕ್ಕೆ 10 ನಿಮಿಷಗಳ ಕಾಲ ಕೈ ಎತ್ತಿದರೂ ನನ್ನ ಕಡೆ ನೋಡದೇ ನಿರ್ಲಕ್ಷಿಸಿದರಿ. ಹೀಗಾಗಿ ಬಾವಿಗೆ ಬಂದೆ. ಪ್ರತಿಪಕ್ಷಗಳ ಕಡೆಗೆ ನಿಮ್ಮ ಮಲತಾಯಿಯ ವರ್ತನೆಯು ‘ಭಾರತೀಯ ಸಂಸತ್ತಿನ ಇತಿಹಾಸವನ್ನು ಕಳಂಕಗೊಳಿಸಿದೆ’ ಎಂದು ಖರ್ಗೆ ಅವರು ಸ್ಪೀಕರ್‌ಗೇ ಚಾಟಿ ಬೀಸಿದರು.