ಕಳೆದ 10 ವರ್ಷಗಳಲ್ಲಿ ಅಘೋಷಿತ ತುರ್ತುಸ್ಥಿತಿ: ಮೋದಿಗೆ ಖರ್ಗೆ ತಿರುಗೇಟು

| Published : Jun 26 2024, 01:32 AM IST

ಕಳೆದ 10 ವರ್ಷಗಳಲ್ಲಿ ಅಘೋಷಿತ ತುರ್ತುಸ್ಥಿತಿ: ಮೋದಿಗೆ ಖರ್ಗೆ ತಿರುಗೇಟು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 10 ವರ್ಷಗಳಲ್ಲಿ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು ನೀಡಿದ್ದಾರೆ.

ನವದೆಹಲಿ:’ತುರ್ತು ಪರಿಸ್ಥಿತಿ ಹೇರುವುದಕ್ಕೆ ಕಾರಣವಾದ ಮನಸ್ಥಿತಿ ಇಂದಿಗೂ ಅದೇ ಪಕ್ಷದಲ್ಲಿ ಜೀವಂತವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು, ‘ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ’ ಎಂದಿದ್ದಾರೆ,

ಟ್ವೀಟ್ ಮಾಡಿರುವ ದಕ್ಕೆ ಖರ್ಗೆ, ‘ಪಕ್ಷಗಳನ್ನು ಒಡೆಯುವುದು, ಚುನಾಯಿತ ಸರ್ಕಾರಗಳನ್ನು ಹಿಂಬದಿಯಿಂದ ಬೀಳಿಸುವುದು. ಇಡಿ, ಸಿಬಿಐನಂತಹ ಸಂಸ್ಥೆಗಳ ದುರುಪಯೋಗ,ಶೇ.95ರಷ್ಟು ಪ್ರತಿಪಕ್ಷದ ನಾಯಕರನ್ನು, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕುವುದು, ಚುನಾವಣೆಗೂ ಮುನ್ನ ಅಧಿಕೃತ ಯಂತ್ರಗಳನ್ನು ಬಳಸುವುದು. ಬೂತ್ ಮಟ್ಟವನ್ನ ಅಸ್ತವ್ಯಸ್ತಗೊಳಿಸಿರುವುದು ಅಘೋಷಿತ ತುರ್ತುಸ್ಥಿತಿ ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.