ಮೋದಿ ಕುರಿತ ಖರ್ಗೆ ಹೇಳಿಕೆ ಅಸಹ್ಯ, ಅವಮಾನಕರ - 2047ರ ವಿಕಸಿತ ಭಾರತ ಖರ್ಗೆ ನೋಡುವಂತಾಗಲಿ : ಶಾ

| Published : Oct 01 2024, 07:31 AM IST

Amith Shah

ಸಾರಾಂಶ

‘ಮೋದಿಯನ್ನು ಅಧಿಕಾರದಿಂದ ಇಳಿಸುವವರೆಗೂ ನಾನು ಸಾಯುವುದಿಲ್ಲ’ ಎಂಬ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ‘ಅಸಹ್ಯ ಮತ್ತು ಅವಮಾನಕರ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಟುವಾಗಿ ಟೀಕಿಸಿದ್ದಾರೆ.

ನವದೆಹಲಿ: ‘ಮೋದಿಯನ್ನು ಅಧಿಕಾರದಿಂದ ಇಳಿಸುವವರೆಗೂ ನಾನು ಸಾಯುವುದಿಲ್ಲ’ ಎಂಬ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ‘ಅಸಹ್ಯ ಮತ್ತು ಅವಮಾನಕರ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಟುವಾಗಿ ಟೀಕಿಸಿದ್ದಾರೆ.

‘ದ್ವೇಷವನ್ನು ಪ್ರದರ್ಶಿಸುವ ಭರದಲ್ಲಿ ಖರ್ಗೆ ತಮ್ಮ ಆರೋಗ್ಯ ಸಮಸ್ಯೆಯ ವಿಷಯದಲ್ಲಿ ಪ್ರಧಾನಿ ಮೋದಿಯವರನ್ನು ಎಳೆತಂದಿದ್ದಾರೆ. ಇದು ಮೋದಿಯವರ ಬಗ್ಗೆ ಕಾಂಗ್ರೆಸ್ಸಿಗರಿಗೆ ಇರುವ ದ್ವೇಷ, ಭಯ ತೋರಿಸುತ್ತದೆ. ಅವರು ಸದಾ ಮೋದಿಯ ಧ್ಯಾನದಲ್ಲೇ ಇರುತ್ತಾರೆ’ ಎಂದು ಅಮಿತ್‌ ಶಾ ಹೇಳಿದ್ದಾರೆ.

ಜೊತೆಗೆ, ‘ನಾವೆಲ್ಲರೂ ಖರ್ಗೆಯವರ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ. 2047ರ ವಿಕಸಿತ ಭಾರತವನ್ನೂ ಅವರು ನೋಡುವಂತಾಗಲಿ’ ಎಂದರು.

ಇದಕ್ಕೆ ತಿರುಗೇಟು ನೀಡಿರುವ ಖರ್ಗೆ, ‘ಶಾ ಅವರು ಮಣಿಪುರ, ಜನಗಣತಿ ಮತ್ತು ಜಾತಿಗಣತಿಯಂತಹ ಗಂಭೀರ ವಿಷಯಗಳತ್ತ ಗಮನ ಹರಿಸಬೇಕು. ನಿಮ್ಮ ಸರ್ಕಾರದ ಸಮೀಕ್ಷೆಯ ಪ್ರಕಾರ ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವವರಲ್ಲಿ ಬಹುತೇಕರು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದವರಾಗಿದ್ದಾರೆ. ಅವರಿಗೆ ಉಪಯೋಗವಾಗುವುದರಿಂದಲೇ ಬಿಜೆಪಿ ಜಾತಿಗಣತಿಯನ್ನು ವಿರೋಧಿಸುತ್ತಿದೆ’ ಎಂದರು. ಜೊತೆಗೆ ಕಾಂಗ್ರೆಸ್‌ ಜಾತಿಗಣತಿಯನ್ನು ನಡೆಸಿಯೇ ತೀರುವುದು ಎಂದೂ ಅವರು ಘೋಷಿಸಿದರು.