ಮಹಿಳೆಯರ ಉತ್ಪನ್ನಕ್ಕೆ ಹೆಚ್ಚು ಬೆಲೆಯೇಕೆ? ಕಿರಣ್‌ ಶಾ ಕಿಡಿ

| Published : Mar 14 2024, 02:07 AM IST

ಮಹಿಳೆಯರ ಉತ್ಪನ್ನಕ್ಕೆ ಹೆಚ್ಚು ಬೆಲೆಯೇಕೆ? ಕಿರಣ್‌ ಶಾ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

‘ಗುಲಾಬಿ ತೆರಿಗೆ ಸಂಸ್ಕೃತಿ’ ನಿಗ್ರಹಕ್ಕೆ ಆಗ್ರಹ ಮಾಡಿ ಮಹಿಳೆಯರ ಉತ್ಪನ್ನ ಖರೀದಿ ಮಾಡುವುದನ್ನು ನಿಲ್ಲಿಸಲು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಆಗ್ರಹಿಸಿದ್ದಾರೆ.

ನವದೆಹಲಿ: ಮಾರುಕಟ್ಟೆಯಲ್ಲಿ ಪುರುಷರ ಉತ್ಪನ್ನಗಳಿಗಿಂತ ಮಹಿಳೆಯರ ಉತ್ಪನ್ನಕ್ಕೆ ಹೆಚ್ಚು ಬೆಲೆ ಮಾಡಿ ಶೋಷಿಸುತ್ತಿರುವ ಕುರಿತು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಉದಾಹರಣೆ ಸಹಿತ ವಿಡಿಯೋ ಮಾಡಿ ಹರಿಬಿಟ್ಟಿದ್ದ ವ್ಯಕ್ತಿಯೊಬ್ಬನ ಟ್ವೀಟನ್ನು ಕಿರಣ್‌ ಟ್ಯಾಗ್‌ ಮಾಡಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ, ‘ಮಾರುಕಟ್ಟೆಯಲ್ಲಿ ಸಮಾನ ತೂಕ ಮತ್ತು ಗುಣಮಟ್ಟವಿದ್ದರೂ ಪುರುಷರ ಉತ್ಪನ್ನಕ್ಕಿಂತ ಮಹಿಳೆಯರ ಉತ್ಪನ್ನಕ್ಕೆ ಗುಲಾಬಿ ತೆರಿಗೆಯ (ಮಹಿಳಾ ವಸ್ತುಗಳಿಗೆ ತೆರಿಗೆ) ಹೆಸರಿನಲ್ಲಿ ಹೆಚ್ಚು ಬೆಲೆ ನಿಗದಿಗೊಳಿಸಿ ಶೋಷಿಸಲಾಗುತ್ತಿದೆ. ಅದು ಸೌಂದರ್ಯವರ್ಧಕ ವಸ್ತುಗಳಲ್ಲಿ ಇನ್ನೂ ಹೆಚ್ಚಿನ ಶೋಷಣೆ ನಡೆಯುತ್ತಿದೆ. ಇದರ ಖರೀದಿಯನ್ನು ಮಹಿಳೆಯರು ನಿಲ್ಲಿಸಿದಾಗ ಇಂತಹ ಶೋಷಣೆಯನ್ನು ನಿಲ್ಲಿಸಬಹುದು’ ಎಂದು ಕರೆ ನೀಡಿದ್ದಾರೆ.