ಸಾರಾಂಶ
ಪ್ರೈಮ್ ವಾಲಿಬಾಲ್ ಲೀಗ್(ಪಿವಿಎಲ್)ನ ಗೋವಾ ಗಾರ್ಡಿಯನ್ಸ್ ತಂಡಕ್ಕೆ ತಾರಾ ಕ್ರಿಕೆಟಿಗ ಕೆ.ಎಲ್.ರಾಹುಲ್ ಸಹ-ಮಾಲೀಕರಾಗಿದ್ದಾರೆ.
ತಮ್ಮ ಹೊಸ ಅಧ್ಯಾಯದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಹುಲ್ , ‘ಕೇವಲ ವಾಲಿಬಾಲ್ ಬೆಂಬಲಿಗನಾಗಿ ಮಾತ್ರವಲ್ಲದೇ ಸಹ ಮಾಲೀಕನಾಗಿ ಗೋವಾ ಗಾರ್ಡಿಯನ್ಸ್ ತಂಡಕ್ಕೆ ಸೇರಲು ಸಂತಸವಾಗುತ್ತಿದೆ. ವಾಲಿಬಾಲ್ ಯಾವಾಗಲೂ ನಾನು ಆನಂದಿಸುವ ಕ್ರೀಡೆಯಾಗಿದ್ದು, ಇಲ್ಲಿ ನನ್ನ ಪಾತ್ರವನ್ನು ನಿರ್ವಹಿಸಲು ಉತ್ಸುಹಕನಾಗಿದ್ದೇನೆ’ ಎಂದಿದ್ದಾರೆ. ಪಿವಿಎಲ್‌ನ 4ನೇ ಆವೃತ್ತಿ ಆ.2 ರಿಂದ 26ರ ತನಕ ಹೈದರಾಬಾದ್‌ನಲ್ಲಿ ನಡೆಯಲಿದೆ.