ಸಾರಾಂಶ
ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ 22 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ
ಪಟನಾ: ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ 22 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ರಾಜ್ಯದ 40 ಸ್ಥಾನಗಳ ಪೈಕಿ ಇಂಡಿಯಾ ಮೈತ್ರಿಕೂಟದ ಆರ್‌ಜೆಡಿ 23 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಈ ಪೈಕಿ 22 ಸ್ಥಾನಗಳಿಗೆ ಅದು ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಇದರಲ್ಲಿ ಲಾಲು ಪ್ರಸಾದ್ ಅವರ ಇಬ್ಬರು ಪುತ್ರಿಯರಾದ ರೋಹಿಣಿ ಆಚಾರ್ಯ, ಮಿಸಾ ಭಾರತಿಗೆ ಸ್ಥಾನ ನೀಡಲಾಗಿದೆ.
ಈ ಹಿಂದೆ ಲಾಲು ಪ್ರಸಾದ್ ಹಲವು ವರ್ಷ ಪ್ರತಿನಿಧಿಸಿದ್ದ ಸರಣ್‌ನಿಂದ ರೋಹಿಣಿ ಮತ್ತು ಪಾಟಲಿಪುತ್ರದಿಂದ ಮಿಸಾ ಕಣಕ್ಕೆ ಇಳಿಯುತ್ತಿದ್ದಾರೆ. ಮಿಸಾ, ಹಾಲಿ ರಾಜ್ಯಸಭಾ ಸದಸ್ಯೆಯೂ ಹೌದು.