ಸಾರಾಂಶ
ನವದೆಹಲಿ: ಭಾರತದಲ್ಲಿ 1.25 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. 1990ಕ್ಕೆ ಹೋಲಿಸದಿರೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣದಲ್ಲಿ 40 ಲಕ್ಷದಷ್ಟು ಭಾರೀ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿ ಅನ್ವಯ 2022ರಲ್ಲಿ ಭಾರತದಲ್ಲಿ 5ರಿಂದ 19ರ ವಯೋಮಾನದ ನಡುವಿನ 1.25 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆಗೆ ತುತ್ತಾಗಿದ್ದರು. ಈ ಪೈಕಿ 7.3 ಕೋಟಿ ಬಾಲಕರು ಮತ್ತು 5.2 ಕೋಟಿ ಬಾಲಕಿಯರು. ಜೊತೆಗೆ ಭಾರತದಲ್ಲಿ 4.4 ಕೋಟಿ ಮಹಿಳೆಯರು ಮತ್ತು 2.6 ಕೋಟಿ ಪುರುಷರ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ.ಇನ್ನು ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರ ಮಕ್ಕಳು, ಯುವಕರು ಮತ್ತು ಹಿರಿಯರ ಪ್ರಮಾಣ ಜಾಗತಿಕ ಮಟ್ಟದಲ್ಲಿ 100 ಕೋಟಿ ದಾಟಿದೆ ಎಂದು ವರದಿ ಎಚ್ಚರಿಸಿದೆ.ಹವಾಮಾನ ಬದಲಾವಣೆ, ಕೋವಿಡ್ ಸಾಂಕ್ರಾಮಿಕ ಸೃಷ್ಟಿಸಿದ ಅವಾಂತರಗಳು ಉಕ್ರೇನ್-ರಷ್ಯಾ ಯುದ್ಧಗಳು ವಿಶ್ವದಾದ್ಯಂತ ವಿವಿಧ ವಯೋಮಾನದ ಜನರಲ್ಲಿ ಬೊಜ್ಜು ಮತ್ತು ಅಪೌಷ್ಠಿಕತೆಯ ಸಮಸ್ಯೆಯನ್ನು ಹೆಚ್ಚಿಸಿವೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.