ಸಾರಾಂಶ
ಒಂದು ದೇಶದಲ್ಲಿ ಒಂದು ಬಾರಿಗೆ ಮಾತ್ರ ಚುನಾವಣೆ ನಡೆಸುವ ಕುರಿತಾಗಿ ಕಾನೂನು ಆಯೋಗದಿಂದ ಕೇಂದ್ರ ಸರ್ಕಾರಕ್ಕೆ ಇಂದು ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ನವದೆಹಲಿ: ಒಂದು ದೇಶ, ಒಂದು ಚುನಾವಣೆ ಕುರಿತು ವರದಿ ಸಿದ್ಧಪಡಿಸಿರುವ ಕಾನೂನು ಆಯೋಗ, ಬುಧವಾರ ಅಥವಾ ಗುರುವಾರ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ ಎನ್ನಲಾಗಿದೆ. ನ್ಯಾ. ರಿತುರಾಜ್ ಅವಸ್ಥಿ ನೇತೃತ್ವದ ಆಯೋಗವು, ಜನರು, ರಾಜಕೀಯ ಪಕ್ಷಗಳಿಂದ ಮತ್ತು ಸಮಾಜದ ವಿವಿಧ ವಲಯಗಳಿಂದ ಸಂಗ್ರಹಿಸಿದ ಅಭಿಪ್ರಾಯ ಆಧರಿಸಿ 2029ರಿಂದ ದೇಶದಲ್ಲಿ ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ತರಬೇಕು ಎಂದು ಶಿಫಾರಸು ಮಾಡಲಿದೆ ಎನ್ನಲಾಗಿದೆ.
ನೀತಿ ಜಾರಿಗೆ ಸಾಕಷ್ಟು ಬದಲಾವಣೆ ಅಗತ್ಯವಿರುವ ಹಿನ್ನೆಲೆಯಲ್ಲಿ 2024ರಲ್ಲೇ ಇದರ ಜಾರಿ ಸಾಧ್ಯವಾಗದು. ಹೀಗಾಗಿ 2029ರಿಂದ ಈ ನೀತಿ ಜಾರಿಗೆ ತರಬೇಕು ಎಂದು ಆಯೋಗ ಶಿಫಾರಸು ಮಾಡಲಿದೆ ಎನ್ನಲಾಗಿದೆ.ಇದೇ ವಿಷಯ ಸಂಬಂಧ ವರದಿ ನೀಡಲು ಕೇಂದ್ರ ಸರ್ಕಾರವು, ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ನೇತೃತ್ವದಲ್ಲೂ ಸಮಿತಿ ರಚಿಸಿದ್ದು, ಅದು ಕೂಡಾ ತನ್ನ ವರದಿ ಸಿದ್ಧಪಡಿಸುತ್ತಿದೆ.