ಸಾರಾಂಶ
ಈರೋಡ್‌ನ ಶಿವಗಿರಿಯ ಪಳಪೂಸಾಯಿನ್ ದೇಗುಲದಲ್ಲಿ ವ್ಯಕ್ತಿಯೊಬ್ಬ ದೇವರ ಪೂಜೆಗೆ ಇಟ್ಟಿದ್ದ ನಿಂಬೆಹಣ್ಣಿಗೆ ಬರೋಬ್ಬರಿ 35 ಸಾವಿರ ರು. ತೆತ್ತು ಹರಾಜಿನಲ್ಲಿ ಖರೀದಿಸಿದ್ದಾನೆ.
ಈರೋಡ್: ಸಾಮಾನ್ಯವಾಗಿ ಯಾವುದಾದರು ವಿಶೇಷ ವಸ್ತುಗಳನ್ನು ಹರಾಜಿನಲ್ಲಿ ಹೆಚ್ಚು ಹಣ ನೀಡಿ ಖರೀದಿ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ತಮಿಳುನಾಡಿನ ದೇಗುಲವೊಂದರಲ್ಲಿ ದೇವರ ಎದುರು ಇರಿಸಿದ್ದ ಕೇವಲ ಒಂದೇ ನಿಂಬೇಹಣ್ಣಿಗೆ ಭಕ್ತರೊಬ್ಬರು ಬರೋಬ್ಬರಿ 35,000 ರು. ನೀಡಿ ಹರಾಜಿನಲ್ಲಿ ಖರೀದಿ ಮಾಡಿದ್ದಾರೆ.
ಈರೋಡ್‌ನಿಂದ 35 ಕಿಲೋಮೀಟರ್ ದೂರದಲ್ಲಿರುವ ಶಿವಗಿರಿ ಗ್ರಾಮದ ಪಳಪೂಸಾಯಿನ್ ದೇಗುಲದಲ್ಲಿ, ಯಾವ ವ್ಯಕ್ತಿ ದೇವರ ಎದುರು ಪೂಜೆ ಮಾಡಿ ಇರಿಸಿದ್ದ ನಿಂಬೆಹಣ್ಣನ್ನು ಖರೀದಿ ಮಾಡುವರೋ, ಅವರಿಗೆ ಐಶ್ವರ್ಯ, ಒಳ್ಳೆಯ ಆರೋಗ್ಯ ಹಾಗೂ ಸನ್ಮಂಗಲವಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶಿವರಾತ್ರಿ ನಿಮಿತ್ತ ನಡೆದ ಹರಾಜು ಪ್ರಕ್ರಿಯೆಯಲ್ಲಿ 15 ಭಕ್ತರು ಭಾಗವಹಿಸಿದ್ದರು. ಅದರಲ್ಲೊಬ್ಬರು ದೇವರ ಎದುರು ಇಟ್ಟಿದ್ದ ನಿಂಬೆ ಹಣ್ಣನ್ನು 35,000 ರು. ನೀಡಿ ಖರೀದಿ ಮಾಡಿದ್ದಾರೆ.