ನಿತ್ಯಾನಂದನ ರೀತಿ ರಾಹುಲ್‌ ಕೈಲಾಸ ದೇಶ ಕಟ್ಟಿ, ಅಲ್ಲಿ ಆಸ್ತಿ ಹಂಚಿಕೆ ಮಾಡಲಿ: ಸಚಿವ ಆರ್‌ಸಿ

| Published : Apr 24 2024, 02:24 AM IST / Updated: Apr 24 2024, 02:25 AM IST

ನಿತ್ಯಾನಂದನ ರೀತಿ ರಾಹುಲ್‌ ಕೈಲಾಸ ದೇಶ ಕಟ್ಟಿ, ಅಲ್ಲಿ ಆಸ್ತಿ ಹಂಚಿಕೆ ಮಾಡಲಿ: ಸಚಿವ ಆರ್‌ಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆರ್ಥಿಕ ಸಮೀಕ್ಷೆ ನಡೆಸಿ ಸಂಪತ್ತಿನ ಸಮಾನ ಹಂಚಿಕೆ ಮಾಡುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಯನ್ನು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಟುವಾಗಿ ಟೀಕಿಸಿದ್ದಾರೆ.

ತಿರುವನಂತಪುರ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆರ್ಥಿಕ ಸಮೀಕ್ಷೆ ನಡೆಸಿ ಸಂಪತ್ತಿನ ಸಮಾನ ಹಂಚಿಕೆ ಮಾಡುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಯನ್ನು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಟುವಾಗಿ ಟೀಕಿಸಿದ್ದಾರೆ. ಒಂದು ವೇಳೆ ರಾಹುಲ್‌ಗೆ ಇಂಥ ಆಲೋಚನೆ ಇದ್ದಲ್ಲಿ, ಅವರು ನಿತ್ಯಾನಂದನ ರೀತಿ ದ್ವೀಪವೊಂದನ್ನು ಹುಡುಕಿ ಅಲ್ಲಿ ಕೈಲಾಸ ದೇಶದ ರೀತಿ ದೇಶ ಕಟ್ಟಲಿ. ಅಲ್ಲಿ ತಮ್ಮ ಸಂಪತ್ತಿನ ಸಮಾನ ಹಂಚಿಕೆ ನೀತಿ ಜಾರಿ ಮಾಡಲಿ. ತಿರುವನಂತಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಶಿ ತರೂರ್‌ ಅವರನ್ನು ಆ ದೇಶದ ವಿದೇಶಾಂಗ ಸಚಿವರಾಗಿ ನೇಮಕ ಮಾಡಿಕೊಳ್ಳಲಿ ಎಂದು ತಿರುವನಂತರಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ರಾಜೀವ್‌ ಚಂದ್ರಶೇಖರ್‌ ವ್ಯಂಗ್ಯವಾಡಿದ್ದಾರೆ.