ಸಿಮ್‌ ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ಕಡ್ಡಾಯ: ಮಸೂದೆ ಪಾಸ್‌

| Published : Dec 21 2023, 01:16 AM IST / Updated: Dec 22 2023, 02:58 PM IST

ಸಿಮ್‌ ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ಕಡ್ಡಾಯ: ಮಸೂದೆ ಪಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಹತ್ವದ ಟೆಲಿಕಾಂ ಮಸೂದೆಗೆ ಲೋಕಸಭೆ ಬುಧವಾರ ಅಂಗೀಕಾರ ನೀಡಿದೆ. ಮಸೂದೆಯ ಪ್ರಕಾರ, ಸಾರ್ವಜನಿಕ ಹಿತಾಸಕ್ತಿ ಮತ್ತು ಭದ್ರತೆಯ ದೃಷ್ಟಿಯಿಂದ ಇನ್ನು ಮುಂದೆ ಸಿಮ್‌ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ಕಡ್ಡಾಯವಾಗಲಿದೆ. ಅಲ್ಲದೇ ಫೋನ್‌ ಕದ್ದಾಲಿಕೆಗೆ 3 ವರ್ಷ ಜೈಲು ಮತ್ತು 2 ಕೋಟಿ ರು. ದಂಡ ವಿಧಿಸಲಾಗುತ್ತದೆ.

ನವದೆಹಲಿ: ಮಹತ್ವದ ಟೆಲಿಕಾಂ ಮಸೂದೆಗೆ ಲೋಕಸಭೆ ಬುಧವಾರ ಅಂಗೀಕಾರ ನೀಡಿದೆ. ಮಸೂದೆಯ ಪ್ರಕಾರ, ಸಾರ್ವಜನಿಕ ಹಿತಾಸಕ್ತಿ ಮತ್ತು ಭದ್ರತೆಯ ದೃಷ್ಟಿಯಿಂದ ಇನ್ನು ಮುಂದೆ ಸಿಮ್‌ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ಕಡ್ಡಾಯವಾಗಲಿದೆ. ಅಲ್ಲದೇ ಫೋನ್‌ ಕದ್ದಾಲಿಕೆಗೆ 3 ವರ್ಷ ಜೈಲು ಮತ್ತು 2 ಕೋಟಿ ರು. ದಂಡ ವಿಧಿಸಲಾಗುತ್ತದೆ.ಇದಕ್ಕಾಗಿ ತುರ್ತು ಸಂದರ್ಭ ಅಥವಾ ಸಾರ್ವಜನಿಕ ಹಿತಾಸಕ್ತಿಯ ಸಂದರ್ಭಗಳಲ್ಲಿ ಯಾವುದೇ ಟೆಲಿಕಾಂ ಕಂಪನಿಯ ಮೊಬೈಲ್‌ ನೆಟ್‌ವರ್ಕ್‌ ವಶಪಡಿಸಿಕೊಳ್ಳುವ ಅಧಿಕಾರವನ್ನು ಈ ಮಸೂದೆ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

ಇದೇ ವೇಳೆ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರು ಪ್ರಕಟಣೆಯ ಉದ್ದೇಶದಿಂದ ಕಳುಹಿಸುವ ಸಂದೇಶಗಳನ್ನು ಕದ್ದು ಓದಿದರೆ, ಅದು ಶಿಕ್ಷಾರ್ಹ ಅಪರಾಧ ಎನ್ನಿಸಿಕೊಳ್ಳಲಿದೆ.