6 ನೇ ಹಂತದ ಚುನಾವಣೆ: ಗಣ್ಯರಿಂದ ಮತದಾನ

| Published : May 26 2024, 01:34 AM IST / Updated: May 26 2024, 05:03 AM IST

ಸಾರಾಂಶ

6ನೇ ಹಂತದ ಲೋಕಸಭಾ ಚುನಾವಣೆಗೆ ಶನಿವಾರ ಮತದಾನ ನಡೆದಿದ್ದು ಹಲವಾರು ಗಣ್ಯರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ನವದೆಹಲಿ: 6ನೇ ಹಂತದ ಲೋಕಸಭಾ ಚುನಾವಣೆಗೆ ಶನಿವಾರ ಮತದಾನ ನಡೆದಿದ್ದು ಹಲವಾರು ಗಣ್ಯರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಾಧೀಶರಾದ ಡಿ.ವೈ. ಚಂದ್ರಚೂಡ್‌ ಅವರು ನವದೆಹಲಿಯಲ್ಲಿ ತಮ್ಮ ಮತದಾನ ಮಾಡಿದರು. 

ಚುನಾವಣಾ ಆಯೋಗದ ಮುಖ್ಯಸ್ಥರಾದ ರಾಜೀವ್‌ ಕುಮಾರ್‌ ಅವರು ತಮ್ಮ ಕುಟುಂಬ ಸಮೇತವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ಇನ್ನು ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಕುಟುಂಬ, ವಿದೇಶಾಂಗ ಸಚಿವ ಜೈಶಂಕರ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕುಟುಂಬ, ಎಎಪಿ ನಾಯಕರಾದ ಸಂಜಯ್‌ ಸಿಂಗ್‌ ದಂಪತಿ, ಆಪ್‌ ಸಂಸದೆ ಸ್ವಾತಿ ಮಲಿವಾಲ್‌, ಸಚಿವರಾದ ಅತಿಶಿ, ಸೌರಭ್‌ ಭಾರದ್ವಾಜ್‌, ಬಿಹಾರ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್‌ ಪಾತ್ರ, ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಪತ್ನಿ ಕಲ್ಪನಾ ಸೊರೇನ್‌, ಅನಂತನಾಗ್‌ನಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಮಾಜಿ ಕ್ರಿಕೆಟ್‌ ಆಟಗಾರ ಕಪಿಲ್‌ ದೇವ್‌, ಗೌತಮ್‌ ಗಂಭೀರ್‌ ಹಾಗೂ ಕಿಕ್ರೆಟ್‌ ಆಟಗಾರರಾದ ಎಂ.ಎಸ್‌. ಧೋನಿ ತಮ್ಮ ಹಕ್ಕು ಚಲಾಯಿಸಿದರು.