ಸಾರಾಂಶ
ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಮರಿಮೊಮ್ಮಗ, ಮರಾಠಿಯ ಕೇಸರಿ ದಿನಪತ್ರಿಕೆ ಸಂಪಾದಕ ದೀಪಕ್ ತಿಲಕ್ (78) ಅವರು ಬುಧವಾರ ಸಾವನ್ನಪ್ಪಿದ್ದಾರೆ.
ಪುಣೆ: ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಮರಿಮೊಮ್ಮಗ, ಮರಾಠಿಯ ಕೇಸರಿ ದಿನಪತ್ರಿಕೆ ಸಂಪಾದಕ ದೀಪಕ್ ತಿಲಕ್ (78) ಅವರು ಬುಧವಾರ ಸಾವನ್ನಪ್ಪಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದೀಪಕ್ ತಿಲಕ್ ಅವರು ಬುಧವಾರ ಮುಂಜಾನೆ ಪುಣೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಧ್ಯಾಹ್ನ ಇವರ ಅಂತ್ಯಕ್ರಿಯೆಯನ್ನು ಪುಣೆಯಲ್ಲಿ ನೆರವೇರಿತು.1881ರಲ್ಲಿ ಬಾಲಗಂಗಾಧರ ತಿಲಕ್ ಅವರು ಶುರು ಮಾಡಿದ್ದ ‘ಕೇಸರಿ’ ಮರಾಠಿ ದಿನಪತ್ರಿಕೆಯನ್ನು ದೀಪಕ್ ಅವರು ನಡೆಸಿಕೊಂಡು ಬರುತ್ತಿದ್ದರು. ಪತ್ರಿಕೆಯ ಧರ್ಮದರ್ಶಿ ಸಂಪಾದಕರಾಗಿದ್ದರು. ಅಲ್ಲದೇ ಕೆಲ ಕಾಲ ತಿಲಕ್ ಮಹಾರಾಷ್ಟ್ರ ವಿದ್ಯಾಪೀಠದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಇವರಿಗೆ ಇಬ್ಬರು ಮಕ್ಕಳು ಮೊಮ್ಮಕ್ಕಳಿದ್ದಾರೆ.