ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಶಾಂತಿಯುತ : ಮೊದಲ ಹಂತದಲ್ಲಿ ಶೇ.59 ಮತದಾನ

| Published : Sep 19 2024, 01:48 AM IST / Updated: Sep 19 2024, 05:09 AM IST

ಸಾರಾಂಶ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ನಡೆದ ಮೊದಲ ಹಂತದ ಮತದಾನದಲ್ಲಿ ಶೇ.59 ರಷ್ಟು ಮತದಾನವಾಗಿದೆ. ಕಿಶ್ತ್‌ವಾರ್‌ನಲ್ಲಿ ಅತಿ ಹೆಚ್ಚು ಮತದಾನ (ಶೇ.77) ಮತ್ತು ಪುಲ್ವಾಮಾದಲ್ಲಿ ಅತೀ ಕಡಿಮೆ (ಶೇ.46) ಮತದಾನ ದಾಖಲಾಗಿದೆ.  

ಶ್ರೀನಗರ/ಜಮ್ಮು: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಬುಧವಾರ ನಡೆದ ಮೊದಲ ಹಂತದ ಮತದಾನ ಪೂರ್ಣ ಶಾಂತಿಯುತವಾಗಿತ್ತು. ಬುಧವಾರ 24 ಕ್ಷೇತ್ರಗಳ 125 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಶೇ.59 ರಷ್ಟು ಮತದಾನ ನಡೆದಿದೆ. 2014ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಡಿಮೆ ಮತದಾನವಾಗಿದೆ. 2014ರಲ್ಲಿ ಶೇ.60.19 ರಷ್ಟು ಮತದಾನವಾಗಿತ್ತು.

ಈ ಬಾರಿ ಕಿಶ್ತ್‌ವಾರ್‌ನಲ್ಲಿ ಶೇ.77 ರಷ್ಟು ಅತಿಹೆಚ್ಚು ಮತದಾನವಾಗಿದ್ದು, ಪುಲ್ವಾಮಾದಲ್ಲಿ ಶೇ.46ರಷ್ಟು ಅತೀ ಕಡಿಮೆ ಮತದಾನವಾಗಿದೆ. ಯಾವುದೇ ಗಲಾಟೆ, ಸಮಸ್ಯೆ ಕಾಣಿಸಿಕೊಳ್ಳದ ಕಾರಣ ಮರು ಮತದಾನಕ್ಕೆ ಹೋಗುವ ಅವಶ್ಯಕತೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆ.25 ರಂದು 26 ಕ್ಷೇತ್ರಗಳಿಗೆ 2ನೇ ಹಂತದಲ್ಲಿ, ಆ.1ರಂದು 40 ಕ್ಷೇತ್ರಗಳಿಗೆ 3ನೇ ಹಂತದ ಚುನಾವಣೆ ನಡೆಲಿದೆ. ಅ.8ರಂದು ಮತ ಎಣಿಕೆ ನಡೆಯಲಿದೆ.

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಮೈತ್ರಿಯಾಗಿ ಸ್ಫರ್ಧೆ ಮಾಡುತ್ತಿದ್ದು, ಪಿಡಿಪಿ ಹಾಗೂ ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿದಿವೆ.