ಸಾರಾಂಶ
ಪುರಿಯ ಜಗನ್ನಾಥನ ಚಿತ್ರವನ್ನು ವಿದೇಶಿ ಮಹಿಳೆ ತಮ್ಮ ತೊಡೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಭುವನೇಶ್ವರ: ಪುರಿಯ ಜಗನ್ನಾಥನ ಚಿತ್ರವನ್ನು ವಿದೇಶಿ ಮಹಿಳೆ ತಮ್ಮ ತೊಡೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಕುರಿತ ಚಿತ್ರ ವೈರಲ್ ಆಗುತ್ತಿದ್ದಂತೆ ಒಡಿಶಾ ಪೊಲೀಸರು ಟ್ಯಾಟೂ ಅಂಗಡಿ ಮಾಲೀಕ ಮತ್ತು ಟ್ಯಾಟೂ ಕಲಾವಿದನನ್ನು ಪೊಲೀಸರು ಬಂಧಿಸಿದ್ದಾರೆ.
ಎನ್‌ಜಿಓನಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿ ಮಹಿಳೆಯೊಬ್ಬರು, ಮಾ.1ರಂದು ಭುವನೇಶ್ವರದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದರು. ಟ್ಯಾಟೂ ಚಿತ್ರದೊಂದಿಗೆ ಕಲಾವಿದ ತೆಗೆದುಕೊಂಡ ಚಿತ್ರ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪರಿಣಾಮ ಜಗನ್ನಾಥನ ಭಕ್ತರು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಟ್ಯಾಟೂ ಅಂಗಡಿಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿವಾದ ಭುಗಿಲೆಳುತ್ತಿದ್ದಂತೆ ಮಹಿಳೆ ವಿಡಿಯೋ ಮಾಡಿ ಕ್ಷಮೆಯಾಚಿಸಿದ್ದಾರೆ. ಟ್ಯಾಟೂ ವಾಸಿಯಾದ ಬಳಿಕ ತೆಗೆಯುವುದಾಗಿ ಹೇಳಿದ್ದಾಳೆ. ಟ್ಯಾಟೂ ಅಂಗಡಿಯವರೂ ಸಹ ಕ್ಷಮೆಯಾಚಿಸಿದ್ದಾರೆ.