ಪತ್ನಿಯನ್ನು ದಿಟ್ಟಿಸುವುದು ನನಗಿಷ್ಟ : ಎಲ್‌ & ಟಿ ಮುಖ್ಯಸ್ಥಗೆ ಮಹೀಂದ್ರಾ ಟಾಂಗ್‌

| Published : Jan 12 2025, 01:20 AM IST / Updated: Jan 12 2025, 04:28 AM IST

ANAND MAHINDRA  0

ಸಾರಾಂಶ

 ಎಷ್ಟೂಂತ ಹೆಂಡತಿಯನ್ನು ನೋಡುತ್ತೀರಿ. ಭಾನುವಾರವೂ ಕೆಲಸ ಮಾಡಿ. ವಾರಕ್ಕೆ 90 ತಾಸು ಕೆಲಸ ಮಾಡಿ ಎಂದಿದ್ದ ಎಲ್‌ ಆ್ಯಂಡ್‌ ಟಿ ಮುಖ್ಯಸ್ಥ ಸುಬ್ರಹ್ಮಣ್ಯನ್‌ ಅವರಿಗೆ ಉದ್ಯಮಿ ಆನಂದ ಮಹೀಂದ್ರಾ ತಿರುಗೇಟು ನೀಡಿದ್ದಾರೆ.

ನವದೆಹಲಿ: ಎಷ್ಟೂಂತ ಹೆಂಡತಿಯನ್ನು ನೋಡುತ್ತೀರಿ. ಭಾನುವಾರವೂ ಕೆಲಸ ಮಾಡಿ. ವಾರಕ್ಕೆ 90 ತಾಸು ಕೆಲಸ ಮಾಡಿ ಎಂದಿದ್ದ ಎಲ್‌ ಆ್ಯಂಡ್‌ ಟಿ ಮುಖ್ಯಸ್ಥ ಸುಬ್ರಹ್ಮಣ್ಯನ್‌ ಅವರಿಗೆ ಉದ್ಯಮಿ ಆನಂದ ಮಹೀಂದ್ರಾ ತಿರುಗೇಟು ನೀಡಿದ್ದಾರೆ. ‘ನನ್ನ ಹೆಂಡತಿ ಚೆನ್ನಾಗಿದ್ದಾಳೆ. ಆಕೆಯನ್ನು ದಿಟ್ಟಿಸಿ ನೋಡುವುದು ನನಗೆ ತುಂಬಾ ಇಷ್ಟ’ ಎಂದು ಎಂದು ಟ್ವೀಟ್‌ ಮಾಡಿದ್ದಾರೆ.

ಬಾಂಗ್ಲಾ ದಾಳಿ ಕೋಮು ಆಧರಿತ ಅಲ್ಲ: ಪೊಲೀಸ್‌ ವರದಿ

ಢಾಕಾ: ‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳಲ್ಲಿ ಬಹುತೇಕ ದಾಳಿಗಳು ರಾಜಕೀಯ ಪ್ರೇರಿತವಾಗಿದ್ದವು. ಉಳಿದಂತೆ ಕೆಲವಷ್ಟೇ ಕೋಮಿನ ಆಧಾರದಲ್ಲಿ ನಡೆದವು’ ಎಂದು ಬಾಂಗ್ಲಾ ಪೊಲೀಸರು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.ಮಧ್ಯಂತರ ಸರ್ಕಾರದ ಮಾಧ್ಯಮ ವಿಭಾಗ ಮಾಹಿತಿ ನೀಡಿದ್ದು, ‘ಒಟ್ಟು 2010 ದಾಳಿಗಳು ನಡೆದಿರುವುದಾಗಿ ಹೇಳಲಾಗಿದೆ. ಇವುಗಳ ಪೈಕಿ 1234 ಪ್ರಕರಣಗಳು ರಾಜಕೀಯ ಉದ್ದೇಶದಿಂದ ನಡೆದವು. ಉಳಿದಂತೆ 20 ಪ್ರಕರಣಗಳು ಕೋಮಿನ ಆಧಾರದಲ್ಲಿ ನಡೆದವಾಗಿದ್ದು, 161 ಕೇಸುಗಳು ಹುಸಿಯಾಗಿವೆ’ ಎಂದು ತಿಳಿಸಿದೆ.

ಶೇಖ್‌ ಹಸೀನಾ ಪದತ್ಯಾಗದ ಹಿಂದಿನ ದಿನದಿಂದ 1769 ಪ್ರಕರಣಗಳನ್ನು ದಾಳಿ ಹಾಗೂ ವಿಧ್ವಂಸಕತೆ ಕೃತ್ಯ ಎಂದು ಪರಿಗಣಿಸಲಾಗಿದೆ. ಪೊಲೀಸರು 62 ಪ್ರಕರಣಗಳನ್ನು ದಾಕಲಿಸಿಕೊಂಡಿದ್ದಾರೆ. ಅಂತೆಯೇ, 35 ಅಪರಾಧಿಗಳನ್ನು ಬಂಧಿಸಲಾಗಿದೆ ಎಂದೂ ಹೇಳಿದೆ.