ಭಾರತೀಯ ರಿಸರ್ವ್‌ ಬ್ಯಾಂಕ್‌ ಬಡ್ಡಿದರ ಇಳಿಕೆ ಬೆನ್ನಲ್ಲೇ ಸಾಲದ ಬಡ್ಡಿದರ ಶೇ.0.15-0.25 ಇಳಿಕೆ

| N/A | Published : Feb 13 2025, 12:46 AM IST / Updated: Feb 13 2025, 04:23 AM IST

ಸಾರಾಂಶ

ಭಾರತೀಯ ರಿಸರ್ವ್‌ ಬ್ಯಾಂಕ್‌ 5 ವರ್ಷ ಬಳಿಕ ರೆಪೋದರವನ್ನು ಶೇ.0.25ರಷ್ಟು ಇಳಿಕೆ ಮಾಡಿದ ಬೆನ್ನಲ್ಲೇ 7 ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಶೇ.0.15ರಿಂದ ಶೇ.0.25ರಷ್ಟು ಇಳಿಸಿವೆ.

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ 5 ವರ್ಷ ಬಳಿಕ ರೆಪೋದರವನ್ನು ಶೇ.0.25ರಷ್ಟು ಇಳಿಕೆ ಮಾಡಿದ ಬೆನ್ನಲ್ಲೇ 7 ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಶೇ.0.15ರಿಂದ ಶೇ.0.25ರಷ್ಟು ಇಳಿಸಿವೆ. ಆದರೆ ದೇಶದ ದೊಡ್ಡ ಬ್ಯಾಂಕ್‌ಗಳಾದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಮಾತ್ರ ಇನ್ನು ಬಡ್ಡಿದರ ಇಳಿಕೆ ಮಾಡಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಪಿಎನ್‌ಬಿ ಶೇ.9ಕ್ಕೆ, ಬ್ಯಾಂಕ್‌ ಆಫ್‌ ಬರೋಡಾ ಶೇ.8.9ಕ್ಕೆ, ಬ್ಯಾಂಕ್‌ ಆಫ್‌ ಇಂಡಿಯಾ, ಇಂಡಿಯನ್‌ ಬ್ಯಾಂಕ್‌ ಮತ್ತು ಯುಕೋ ಬ್ಯಾಂಕ್‌ ಶೇ.0.15-0.25ರಷ್ಟು ಬಡ್ಡಿದರ ಇಳಿಕೆ ಮಾಡಿದೆ. ಇದರ ಜೊತೆಗೆ ಖಾಸಗಿ ಬ್ಯಾಂಕ್‌ಗಳಾದ ಕರೂರ್‌ ವೈಶ್ಯ ಬ್ಯಾಂಕ್‌ ಮತ್ತು ಆರ್‌ಬಿಎಲ್‌ ಬ್ಯಾಂಕ್‌ಗಳು ಬಡ್ಡಿದರವನ್ನು ಶೇ.11.35ಕ್ಕೆ ಇಳಿಸಿವೆ.