ಸಾರಾಂಶ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಎಂದು ಕೊಂಕಾಡಿದ್ದಾರೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಎಂದು ಕೊಂಕಾಡಿದ್ದಾರೆ. ಜೊತೆಗೆ ಆಪ್ತಮಿತ್ರರು, ಮೈತ್ರಿ ಪಕ್ಷಗಳನ್ನು ಓಲೈಕೆ ಮಾಡುವುದಕ್ಕಾಗಿ ಮಂಡನೆ ಮಾಡಲಾಗಿದೆ ಎಂದು ಟೀಕಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್,‘ ಇದು ಖುರ್ಚಿ ಬಚಾವ್ ಬಜೆಟ್. ಮಿತ್ರರ ಕಣ್ಣೊರೆಸುವಿಕೆ. ಅನ್ಯರಾಜಗಳಿಗೆ ಧೋಖಾ ಮಾಡುವ ಮೂಲಕ ಅವರಿಗೆ ಪೊಳ್ಳು ಭರವಸೆಯನ್ನು ನೀಡಿದೆ’ ಎಂದರು.
ಆಪ್ತಮಿತ್ರರ ಓಲೈಕೆ: ಸಾಮಾನ್ಯ ಜನರಿಗೆ ಯಾವುದೇ ನೆರವು ನೀಡದೆ, ‘ಎಎ’ಗಳಿಗೆ (ಅಂಬಾನಿ ಅದಾನಿ) ವಿಶೇಷ ನೆರವು ನೀಡಲಾಗಿದೆ.
ಕಾಪಿ ಪೇಸ್ಟ್: ಕಾಂಗ್ರೆಸ್ ಪ್ರಣಾಳಿಕೆ ಹಾಗೂ ಕಳೆದ ಬಜೆಟ್‌ಗಳ ಕಾಪಿ ಪೇಸ್ಟ್ ಆಗಿದೆ’ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.