ಮ.ಪ್ರ. ತಾರಾ ಪ್ರಚಾರಕ ಪಟ್ಟಿಯಲ್ಲಿ ಉಮಾ ಭಾರತಿಗೆ ಸ್ಥಾನವಿಲ್ಲ

| Published : Mar 28 2024, 12:45 AM IST

ಮ.ಪ್ರ. ತಾರಾ ಪ್ರಚಾರಕ ಪಟ್ಟಿಯಲ್ಲಿ ಉಮಾ ಭಾರತಿಗೆ ಸ್ಥಾನವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯಪ್ರದೇಶದ ಚುನಾವಣಾ ತಾರಾ ಪ್ರಚಾರಕರ ಹೆಸರುಗಳ ಪಟ್ಟಿಯಲ್ಲಿ ಬಿಜೆಪಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರ ಹೆಸರನ್ನು ಕೈ ಬಿಡಲಾಗಿದ್ದು, ಇತ್ತೀಚಿಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಸುರೇಶ್‌ ಪಚೌರಿಯನ್ನು ಸೇರಿಸಿದೆ.

ಭೋಪಾಲ್‌: ಮಧ್ಯಪ್ರದೇಶದ ಚುನಾವಣಾ ತಾರಾ ಪ್ರಚಾರಕರ ಹೆಸರುಗಳ ಪಟ್ಟಿಯಲ್ಲಿ ಬಿಜೆಪಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರ ಹೆಸರನ್ನು ಕೈ ಬಿಡಲಾಗಿದ್ದು, ಇತ್ತೀಚಿಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಸುರೇಶ್‌ ಪಚೌರಿಯನ್ನು ಸೇರಿಸಿದೆ.

ಮಂಗಳವಾರ ರಾತ್ರಿ ಬಿಎಪಿ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸಂಸದರ 40 ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.ಉಮಾಭಾರತಿ ಹಲವು ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಲು ಶ್ರಮಿಸಿದ್ದರು. ಆದರೆ ಇತ್ತೀಚೆಗೆ ನೇಪಥ್ಯಕ್ಕೆ ಸರಿದಿದ್ದರು. 2023ರ ರಾಜ್ಯ ಚುನಾವಣೆಯಲ್ಲೂ ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ.