ಶಪಥದ ವೇಳೆ ಘೋಷಣೆ ಕೂಗುವಂತಿಲ್ಲ: ಹೊಸ ನಿಯಮ

| Published : Jul 04 2024, 01:05 AM IST / Updated: Jul 04 2024, 04:50 AM IST

Loksabha Om birla

ಸಾರಾಂಶ

ಲೋಕಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವಾಗ ಯಾವುದೇ ರೀತಿಯ ಘೋಷಣೆಗಳನ್ನು ಕೂಗಬಾರದು ಎಂದು ಲೋಕಸಭಾ ಸ್ವೀಕರ್‌ ಓಂ ಬಿರ್ಲಾ ಅವರು ನಿಯಮವನ್ನು ತಿದ್ದುಪಡಿ ಮಾಡಿದ್ದಾರೆ.

ನವದೆಹಲಿ: ಲೋಕಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವಾಗ ಯಾವುದೇ ರೀತಿಯ ಘೋಷಣೆಗಳನ್ನು ಕೂಗಬಾರದು ಎಂದು ಲೋಕಸಭಾ ಸ್ವೀಕರ್‌ ಓಂ ಬಿರ್ಲಾ ಅವರು ನಿಯಮವನ್ನು ತಿದ್ದುಪಡಿ ಮಾಡಿದ್ದಾರೆ.

ಇತ್ತೀಚೆಗೆ ನೂತನವಾಗಿ ಲೋಸಭೆಗೆ ಚುನಾಯಿತರಾದ ಸಂಸದರಲ್ಲಿ ಕೆಲವರು ತಮ್ಮ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ‘ಜೈ ಸಂವಿಧಾನ, ಜೈ ಹಿಂದೂ ರಾಷ್ಟ್ರ, ಜೈ ಪ್ಯಾಲೆಸ್ತೀನ್‌’ ಎಂದೆಲ್ಲಾ ಘೋಷಣೆಗಳನ್ನು ಕೂಗಿದ್ದರು. 

ಈ ನಿಟ್ಟಿನಲ್ಲಿ ಈ ತಿದ್ದುಪಡಿಯನ್ನು ಮಾಡಿ ಬಿರ್ಲಾ ಅವರು, ಪ್ರಮಾಣ ವಚನ ಸಂದರ್ಭದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಯಾವುದೇ ರೀತಿಯ ಘೋಷಣೆ ಕೂಗಬಾರದು ಎಂದು ಸಂಸದರಿಗೆ ಸೂಚಿಸಿದ್ದಾರೆ.