ಬಿಜೆಪಿಯ ಅಭ್ಯರ್ಥಿ ಪಲ್ಲವಿ ₹1400 ಕೋಟಿ ಒಡತಿ

| Published : Apr 18 2024, 02:24 AM IST / Updated: Apr 18 2024, 06:34 AM IST

ಬಿಜೆಪಿಯ ಅಭ್ಯರ್ಥಿ ಪಲ್ಲವಿ ₹1400 ಕೋಟಿ ಒಡತಿ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಗೋವಾದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಪಲ್ಲವಿ ಡೆಂಪೋ 1400 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದಾರೆ.

ಮಡಗಾವ್‌: ದಕ್ಷಿಣ ಗೋವಾದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಪಲ್ಲವಿ ಡೆಂಪೋ 1400 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದಾರೆ. ದುಬೈನಲ್ಲಿ 2.5 ಕೋಟಿ ರು. ಮೌಲ್ಯದ ಅಪಾರ್ಟ್‌ಮೆಂಟ್‌, ಲಂಡನ್‌ನಲ್ಲಿ 10 ಕೋಟಿ ರು. ಮೌಲ್ಯದ ಮತ್ತೊಂದು ಅಪಾರ್ಟ್‌ಮೆಂಟ್‌ ಇವೆ ಎಂದು ತಮ್ಮ ಆಸ್ತಿ ವಿವರದಲ್ಲಿ ಸಲ್ಲಿಸಿದ್ದಾರೆ.

ಮೂರನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅಫಿಡವಿಟ್‌ನಲ್ಲಿ ಪಲ್ಲವಿ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ. 255.4 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿದ್ದು, 5.7 ಕೋಟಿ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.

ಪಲ್ಲವಿ ಡೆಂಪೋ ಹಾಗೂ ಅವರ ಪತಿ ಶ್ರೀನಿವಾಸ್‌ ಡೆಂಪೋ ಅವರು ಡೆಂಪೋ ಗ್ರೂಪ್‌ ಕಂಪನಿಯ ಮಾಲೀಕರಾಗಿದ್ದು, ಈ ಕಂಪನಿ ಹಡಗು ನಿರ್ಮಾಣ, ರಿಯಲ್‌ ಎಸ್ಟೇಟ್‌, ಗಣಿಗಾರಿಕೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ. ಶ್ರೀನಿವಾಸ್‌ 998 ಕೋಟಿ ರು. ಒಡೆಯರಾಗಿದ್ದಾರೆ. ಇಬ್ಬರ ಆಸ್ತಿ ಒಟ್ಟಾಗಿ 1400 ಕೋಟಿ ರು. ಮೌಲ್ಯದ್ದಾಗಿದೆ.