ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ 85ನೇ ವಾರ್ಷಿಕ ಸಭೆಯಲ್ಲಿ ಮಾತೃಭೂಮಿಯ ಎಂ.ವಿ. ಶ್ರೇಯಮ್ಸ್ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸನ್ಮಾರ್ಗದ ವಿವೇಕ್ ಗುಪ್ತಾ ಮತ್ತು ಲೋಕಮತದ ಕರಣ್ ರಾಜೇಂದ್ರ ದಾದ್ರಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ನವದೆಹಲಿ: ದಿನಪತ್ರಿಕೆ ಮತ್ತು ನಿಯತಕಾಲಿಕೆಗಳ ಪ್ರಕಾಶಕರ ಉನ್ನತ ಸಂಸ್ಥೆಯಾದ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್) ಅಧ್ಯಕ್ಷರಾಗಿ ಮಾತೃಭೂಮಿಯ ಎಂ.ವಿ. ಶ್ರೇಯಮ್ಸ್ ಕುಮಾರ್ ಚುನಾಯಿತರಾಗಿದ್ದಾರೆ. ಇವರು ಆಜ್‌ ಸಮಾಜ್‌ನ ರಾಕೇಶ್‌ ಶರ್ಮಾ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಅಂತೆಯೇ, ಸನ್ಮಾರ್ಗದ ವಿವೇಕ್‌ ಗುಪ್ತಾ ಮತ್ತು ಲೋಕಮತದ ಕರಣ್‌ ರಾಜೇಂದ್ರ ದಾದ್ರಾ ಉಪಾಧ್ಯಕ್ಷರಾಗಿ, ಅಮರ್‌ ಉಜಾಲಾದ ತನ್ಮಯ್‌ ಮಹೇಶ್ವರಿ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಸೊಸೈಟಿಯ 85ನೇ ವಾರ್ಷಿಕ ಸಭೆಯನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಲಾಯಿತು.

ಡೇಲಿ ತಂತಿಯ ಎಸ್‌. ಬಾಲಸುಬ್ರಮಣಿಯನ್‌ ಆದಿತ್ಯನ್‌, ಪ್ರಗತಿವಾದಿಯ ಸಮಹಿತ್‌ ಬಲ್‌, ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿಯ ಕೆ.ಎನ್‌. ತಿಲಕ್‌ ಕುಮಾರ್‌, ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ನ ವಿವೇಕ್‌ ಗೋಯಂಕಾ, ದೈನಿಕ್‌ ಜಾಗರಣ್‌ನ ಮಹೇಂದ್ರ ಮೋಹನ್‌ ಗುಪ್ತಾ, ವ್ಯಾಪಾರ್‌ ಜನ್ಮಭೂಮಿಯ ಕುಂದನ್‌ ವ್ಯಾಸ್‌, ಟೆಲಿಗ್ರಾಫ್‌ನ ಅತೀದೇವ್‌ ಸರ್ಕಾರ್‌, ಸಾಕ್ಷಿಯ ಕೆ.ಆರ್‌.ಪಿ. ರೆಡ್ಡಿ ಮತ್ತು ಸಕಾಲ್‌ನ ಪ್ರತಾಪ್‌ ಜಿ. ಪವಾರ್‌ ಸೇರಿದಂತೆ 41 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ.