ಲಿವ್‌ಇನ್‌ ಸಂಗಾತಿಗಳು ಬೇರ್ಪಟ್ಟಾಗ ಮಹಿಳೆ ಜೀವನಾಂಶಕ್ಕೆ ಅರ್ಹಳು

| Published : Apr 07 2024, 01:52 AM IST / Updated: Apr 07 2024, 05:17 AM IST

ಲಿವ್‌ಇನ್‌ ಸಂಗಾತಿಗಳು ಬೇರ್ಪಟ್ಟಾಗ ಮಹಿಳೆ ಜೀವನಾಂಶಕ್ಕೆ ಅರ್ಹಳು
Share this Article
  • FB
  • TW
  • Linkdin
  • Email

ಸಾರಾಂಶ

ಮದುವೆಯಾಗದೇ ಪುರುಷ, ಮಹಿಳೆ ಇಬ್ಬರು ಸಾಕಷ್ಟು ಎನ್ನಬಹುದಾದ ಅವಧಿಗೆ ಲಿವ್‌ಇನ್‌ ಸಂಗಾತಿಗಳಾಗಿದ್ದು, ಬೇರ್ಪಟ್ಟಾಗ ಮಹಿಳೆ ಜೀವನಾಂಶಕ್ಕೆ ಅರ್ಹಳು ಎಂದು ಮಧ್ಯಪ್ರದೇಶದ ಹೈಕೋರ್ಟ್‌ ತೀರ್ಪು ನೀಡಿದೆ.

ಭೋಪಾಲ್: ಮದುವೆಯಾಗದೇ ಪುರುಷ, ಮಹಿಳೆ ಇಬ್ಬರು ಸಾಕಷ್ಟು ಎನ್ನಬಹುದಾದ ಅವಧಿಗೆ ಲಿವ್‌ಇನ್‌ ಸಂಗಾತಿಗಳಾಗಿದ್ದು, ಬೇರ್ಪಟ್ಟಾಗ ಮಹಿಳೆ ಜೀವನಾಂಶಕ್ಕೆ ಅರ್ಹಳು ಎಂದು ಮಧ್ಯಪ್ರದೇಶದ ಹೈಕೋರ್ಟ್‌ ತೀರ್ಪು ನೀಡಿದೆ. ಈ ಮೂಲಕ ಲಿವ್ಇನ್‌ ರಿಲೇಷನ್‌ಶಿಪ್‌ಗಳಲ್ಲಿ ಮಹಿಳೆಯರ ಹಕ್ಕನ್ನು ಎತ್ತಿ ಹಿಡಿಯುವ ಮೂಲಕ ಮಹತ್ತರ ಆದೇಶ ಹೊರಡಿಸಿದೆ.

ಅವಿವಾಹಿತ ಪುರುಷ ಮತ್ತು ಮಹಿಳೆ ಇಬ್ಬರೂ ಸಾಕಷ್ಟು ಸಮಯ ಒಂದಾಗಿ ಜೀವನ ಸಾಗಿಸಿದ್ದಾರೆ. ಈ ಸಂಬಂಧದಲ್ಲಿ ಅವರಿಗೆ ಮಗು ಕೂಡಾ ಜನಿಸಿದೆ. ನಂತರ ಕಾರಣಾಂತರದಿಂದ ಜೋಡಿ ಬೇರಾಗಿದೆ. ಆದರೆ ಇದರ ಹೊರತಾಗಿಯೂ ಮಹಿಳೆ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ ಎಂದು ಕೋರ್ಟ್‌ ಹೇಳಿದೆ. 

ವಿವಾಹಿತ ಸಂಬಂಧಗಳಲ್ಲಿ ಮಾತ್ರವೇ ಜೀವನಾಂಶಕ್ಕೆ ಆದೇಶ ನೀಡಲಾಗುವ ಕಾರಣ ಈ ತೀರ್ಪು ಸಾಕಷ್ಟು ಮಹತ್ವ ಪಡೆದುಕೊಂಡಿದೆ.ಜೊತೆಗೆ ಈ ಪ್ರಕರಣದಲ್ಲಿ ಪ್ರತ್ಯೇಕವಾಗಿರುವ ಪುರುಷ ತನ್ನ ಮಾಜಿ ಜೀವನ ಸಂಗಾತಿಗೆ ಮಾಸಿಕ 1500 ಜೀವನಾಂಶ ನೀಡಬೇಕು ಎಂದು ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.